Call Us Now: 08272 221717

ನಾಗರಿಕ ಸೇವೆಗಳ ತರಬೇತಿ ಸಂಯೋಜಿತ ಪದವಿಗೆ ಪಂಚಮಿ ಮಾರೂರು ಆಯ್ಕೆ

September 22, 2020

ಮೂಡುಬಿದಿರೆ: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ವತಿಯಿಂದ ನಾಗರಿಕ ಸೇವೆಗಳ ತರಬೇತಿ ಸಂಯೋಜಿತ ಪದವಿ 2019-20 ಸಾಲಿಗೆ ಪಂಚಮಿ ಮಾರೂರು ಆಯ್ಕೆಯಾಗಿದ್ದಾರೆ.


ಬಿ.ಕಾಂ ಪದವಿ ಕೋರ್ಸ್‍ಗಳೊಂದಿಗೆ ಯುಪಿಎಸ್‍ಇ, ಐಎಎಸ್, ಕೆಪಿಎಸ್‍ಇ(ಕೆಎಎಸ್) ಕೋಚಿಂಗ್ ಒಳಗೊಂಡಂತೆ (ಇಂಟಿಗ್ರೆಟೆಡ್ ಡಿಗ್ರಿ ವಿತ್ ಯುಪಿಎ, ಕೆಪಿಎ ಕೋಚಿಂಗ್ ) ಉಚಿತ ಊಟ, ವಸತಿ ಮತ್ತಿತರ ಮೂಲಭೂತ ಸೌಲಭ್ಯಗಳು ದೊರಕಲಿದೆ. ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‍ಗೆ ದಾಖಲಾತಿ ಪಡೆದಿದ್ದಾಳೆ. ಪ್ರತಿಭೆಯ ಆಧಾರದ ಮೇಲೆ ಆಯ್ಕೆಗೊಂಡ 50 ವಿದ್ಯಾರ್ಥಿಗಳ ಪೈಕಿ ಈಕೆಯೂ ಒಬ್ಬಳು. ಈಕೆ ಮೂಡುಬಿದಿರೆಯ ಮಾರೂರಿನ ಪಾಶ್ರ್ವನಾಥ-ದೀಪಶ್ರೀ ದಂಪತಿಯ ಪುತ್ರಿ.