Call Us Now: 08272 221717

ಮೂಡುಬಿದಿರೆ ತಾಲೂಕು ಪತಂಜಲಿ ಬಳಗದಿಂದ ಗಿಡ ಮೂಲಿಕೆ ದಿವಸ್ ಆಚರಣೆ

August 6, 2020

ಮೂಡುಬಿದಿರೆ: ಪತಂಜಲಿ ಯೋಗ ಸಮಿತಿ ಮೂಡುಬಿದಿರೆ ತಾಲೂಕು, ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಜಡೀ ಬೂಟಿ ದಿವಸ್ ಆಚರಣೆ ಕಾಮಧೇನು ಸಭಾಂಗಣದಲ್ಲಿ ಜರಗಿತು.

ಜಿಲ್ಲಾ ಯೋಗ ಸಮಿತಿ ಪ್ರಭಾರಿ ರಾಘವೇಂದ್ರ ರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಯೋಗವನ್ನು ಉಚಿತವಾಗಿ ಜನಪ್ರಿಯಗೊಳಿಸಿದ ಬಾಬಾ ರಾಮ್ದೇವ್ ಬಳಗದಲ್ಲಿನ ಆಚಾರ್ಯ ಬಾಲಕೃಷ್ಣ ಅವರು ಆಯುರ್ವೇದಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಯೋಗ, ಆಯುರ್ವೇದದ ಜತೆಗೆ ಆರೋಗ್ಯವನ್ನು ಸಮಾಜದ ಎಲ್ಲೆಡೆ ಜನತೆಗೆ ದೊರೆಯುವಂತೆ ಮಾಡುವಲ್ಲಿ ಆಚಾರ್ಯರ ಸೇವೆ ಕೂಡಾ ಅನನ್ಯವಾದದ್ದು ಎಂದರು. ಕೊರೋನಾ ಸಂಕಟದ ಈ ಸಮಯದಲ್ಲೂ ಆಯುರ್ವೇದದ ಗಿಡ ಮೂಲಿಕೆಗಳನ್ನೇ ಬಳಸಿಕೊಂಡು ದೇಹದ ಸ್ವಸ್ಥತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಅವರು ವಿವರಿಸಿದರು.

ಯೋಗ ಗುರು ಸಮಿತಿಯ ತಾಲೂಕು ಪ್ರಭಾರಿ ಡಾ.ರವಿ ಕುಮಾರ್, ಭಾರತ್ ಸ್ವಾಭಿಮಾನ್ ಟ್ರಸ್ಟ್ನ ತಾಲೂಕು ಪ್ರಭಾರಿ ಪ್ರಕಾಶ್ ಅಮೀನ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರಿಗೂ ಜೌಷದೀಯ ಸಸ್ಯಗಳನ್ನು ವಿತರಿಸಲಾಯಿತು.