Call Us Now: 08272 221717

ಬೆಳುವಾಯಿಯಲ್ಲಿ ಅಪಘಾತ: ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತ

September 10, 2020

ಮೂಡುಬಿದಿರೆ: ಬೆಳುವಾಯಿಯಲ್ಲಿ ಟೆಂಪೋ-ಬೈಕ್ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಬೆಳುವಾಯಿ ಕರಿಯನಂಗಡಿಯ ಪವನ್ ಕೋಟ್ಯಾನ್ ಮೃತ ಯುವಕ. ಈತ ಶನಿವಾರ ರಾತ್ರಿ ಬೆಳುವಾಯಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಕಾಂತಾವರಕ್ಕೆ ಹೋಗುತ್ತಿದ್ದಾಗ ಮಿನಿ ಟೆಂಪೋಗೆ ಬೈಕ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಪವನ್ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ.

ಪವನ್ ಬಿಜೆಪಿ ಶಿರ್ತಾಡಿ ಮಹಾಶಕ್ತಿ ಕೇಂದ್ರದ ಬೆಳುವಾಯಿ ಕುಕ್ಕುಡೆಲು ಗ್ರಾಮದ 1 ನೇ ವಾರ್ಡಿನ ಅಧ್ಯಕ್ಷರಾಗಿದ್ದರು.