Call Us Now: 08272 221717

ಕೃಷಿ ಭೂಮಿ ಖರೀದಿಗೆ ಕಾನೂನು ತೊಡಕು ನಿವಾರಣೆ ತೀರ್ಮಾನ ಸ್ವಾಗತಾರ್ಹ

June 13,2020

ಮೂಡುಬಿದಿರೆ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79 ಎ, ಬಿ, ಸಿ ಮತ್ತು 63 ಕಲಂ ಗಳನ್ನು ರದ್ದುಪಡಿಸಲು ಸಚಿವ ಸಂಪುಟ ಸಭೆ ತೀರ್ಮಾನ ಸ್ವಾಗತಾರ್ಹ. ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಂಡು ಭೂ-ಪರಿವರ್ತನೆ ಬಗ್ಗೆ ಹೊಸ ನಿಯಮಾವಳಿ ಸರಕಾರ ರಚಿಸುವುದು ಅಗತ್ಯತೆ ಇದೆ ಎಂದು ಮೂಡುಬಿದಿರೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ.
ಕಾಲಕ್ಕೆ ತಕ್ಕಂತೆ ಕಾನೂನುಗಳ ತಿದ್ದುಪಡಿ ಅನಿವಾರ್ಯ. ತಿದ್ದುಪಡಿಯ ಬಗ್ಗೆ ಸರಕಾರದ ಗಮನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.