Call Us Now: 08272 221717

ಕೊಡ್ಯಡ್ಕ ದೇವಳದ ಮಾಜಿ ಮೇಲ್ವಿಚಾರಕ, ಸಮಾಜಸೇವಕ ಪ್ರಸಾದ್ ಕೊಡ್ಯಡ್ಕ ನಿಧನ

July 22, 2020

ಮೂಡುಬಿದಿರೆ: ಕೊಡ್ಯಡ್ಕ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಳದ ಮಾಜಿ ಮೇಲ್ವಿಚಾರಕ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ಪ್ರಸಾದ್ ಕೊಡ್ಯಡ್ಕ ಅವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಕಳೆದ ಒಂದು ವಾರಗಳಿಂದ ಮೂಡುಬಿದಿರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂಡುಬಿದಿರೆ ತಾಲೂಕಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇತ್ತೀಚೆಗೆ ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸುವಲ್ಲಿಯೂ ಶ್ರಮಿಸಿದ್ದರು. ಪ್ರಶಾಂತ್ ಕೊಲೆ ಪ್ರಕರಣ ಹಾಗೂ ಇತರ ಸಂದರ್ಭಗಳಲ್ಲಿ ಮೂಡುಬಿದಿರೆಗೆ ಹೆಚ್ಚವರಿ ಪೊಲೀಸರು ಕರ್ತವ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ದೇವಳದಿಂದ ಆಹಾರ ಒದಗಿಸುವಲ್ಲಿಯೂ ಶ್ರಮಿಸುತ್ತಿದ್ದರು. ನೆಲ್ಲಿಗುಡ್ಡೆ ಮಿತ್ರ ಮಂಡಳಿ, ಆರದಿರಲಿ ಬದುಕು ಆರಾಧನ ಸೇವಾ ಸಂಸ್ಥೆ ಸಹಿತ ಹಲವಾರು ಸೇವಾ ಸಂಸ್ಥೆಗಲ್ಲಿ ಸಕ್ರಿಯರಾಗಿದ್ದ ಅವರು, ಇತ್ತೀಚೆಗೆ ಕೊಡ್ಯಡ್ಕ ದೇವಳದ ಮೇಲ್ವಿಚಾರಕ ಹುದ್ದೆ ತೊರೆದು, ಕೃಷಿ ಕಾಯಕದಲ್ಲಿ ತೊಡಗಿದ್ದರು.