Call Us Now: 08272 221717

ಮೂಡುಬಿದಿರೆ: ಡಿಜೆ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಪ್ರತೀಕ್ಷಾ ನಾಯಕ್ಗೆ 623 ಅಂಕ

August 10, 2020

ಮೂಡುಬಿದಿರೆ: ಇಲ್ಲಿನ ಡಿ.ಜೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತೀಕ್ಷಾ ನಾಯಕ್ 625ರಲ್ಲಿ 623 ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ದಾಖಲೆ ಬರೆದಿದ್ದಾಳೆ.

ಈಕೆ ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 124, ಸಮಾಜ ವಿಜ್ಞಾನದಲ್ಲಿ 99 ಉಳಿದಂತೆ ಕನ್ನಡ, ಹಿಂದಿ, ವಿಜ್ಞಾನ, ಗಣಿತದಲ್ಲಿ ತಲಾ 100 ಅಂಕ ಪಡೆದಿದ್ದಾಳೆ. ಈಕೆ ಮೂಲತಃ ಕಾರ್ಕಳ ಎಳ್ಳಾರೆಯ ಪುರಂದರ ಹೆಚ್. ಲೀಲಾವತಿ ಪಿ ದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯ ಪುತ್ರಿ. ಪುರಂದರ್ ಹೆಚ್. ಅವರು ಮಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಿನೀಯರ್ ಲ್ಯಾಬ್ ಟೆಕ್ನಾಲಜಿಸ್ಟ್ ಆಗಿದ್ದು, ತಾಯಿ ಲೀಲಾವತಿ ಅವರು ಮೂಡುಬಿದಿರೆಯಲ್ಲಿ ಸುರಕ್ಷಾ ಕ್ಲೀನಿಕಲ್ ಲ್ಯಾಬ್ ನಡೆಸುತ್ತಿದ್ದಾರೆ.

ಹೀಗೊಂದು ಫಲಿತಾಂಶದ ನಿರೀಕ್ಷೆ ಇತ್ತು. ಸಂತಸವಾಗಿದೆ ಎಂದು ಸಂತಸ ಹಂಚಿಕೊಂಡ ಪ್ರತೀಕ್ಷಾ ವಿಜ್ಞಾನ ವಿಭಾಗದಲ್ಲಿ ಮುಂದಿನ ಶಿಕ್ಷಣಕ್ಕೆ ಆಸಕ್ತಿ ಹೊಂದಿದ್ದಾಳೆ