Call Us Now: 08272 221717

ಮೂಡುಬಿದಿರೆ: ಸಿಡಿಲು ಬಡಿದು ಮನೆಗೆ ಹಾನಿ

June 13,2020

ಮೂಡುಬಿದಿರೆ : ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಗುಡ್ಡೆಯಂಗಡಿಯಲ್ಲಿ ಬುಧವಾರ ಮುಂಜಾವಿನ ವೇಳೆ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಮನೆಗೆ ತೀವ್ರ ಹಾನಿಯಾಗಿ ಸುಮಾರು 75 ಸಾವಿರದಷ್ಟು ನಷ್ಟ ಉಂಟಾಗಿದೆ.

ರಝಿಯಾ ಅವರ ಮನೆಯ ಎದುರಿನ ತೆಂಗಿನ ಮರಕ್ಕೆ ಬಡಿದ ಸಿಡಿಲು ಮುಂದೆ ಬಾವಿಕಟ್ಟೆಯಲ್ಲಿಂದ್ದ ಮೋಟಾರ್ ಪಂಪ್‌ಸೆಟ್‌ಗೆ ಹೊಡೆದು ಅಲ್ಲಿಂದ ಮನೆಗೆ ಬಡಿದ ಪರಿಣಾಮವಾಗಿ ಪಂಪ್‌ಸೆಟ್, ಮನೆಯ ಫ್ರಿಜ್, ಟಿ.ವಿ. ಮತ್ತಿತರ ವಿದ್ಯುತ್ ಮತ್ತು ಇಲೆಕ್ಟಾçನಿಕ್ ಉಪಕರಣಗಳು ಸುಟ್ಟು ಹೋಗಿವೆ. ಗೋಡೆಯಲ್ಲಿದ್ದ ಸ್ವಿಚ್‌ಬೋಡ್‌ಗಳು ಕಿತ್ತು ನೆಲಕ್ಕೆ ಬಿದ್ದಿವೆ. ಎಲ್ಲ ಕಡೆಯ ವಿದ್ಯುತ್ ವಯರಿಂಗ್ ಕಿತ್ತು ಹೋಗಿದೆ.
ಘಟನೆ ನಡೆದ ತಕ್ಷಣ ಮಾಹಿತಿ ಪಡೆದ ಎಪಿಎಂಸಿ ಮಾಜಿ ಸದಸ್ಯ ಮಿತ್ತಬೆÊಲು ವಾಸುದೇವ ನಾಯಕ್ ಹಾಗೂ ಗ್ರಾಮ ಕರಣಿಕ ಗೋಪಾಲ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ನೆರವಿನ ಭರವಸೆ ನೀಡಿದರು.