Call Us Now: 08272 221717

ಪಿಯುಸಿ ಇತಿಹಾಸ ಪಠ್ಯ ಜೈನ ಧರ್ಮದ ತಪ್ಪು ಮಾಹಿತಿ ಸರಿಪಡಿಸುವ ಭಟ್ಟಾರಕ ಶ್ರೀಗಳ ಆಗ್ರಹಕ್ಕೆ ಸಚಿವರ ಸ್ಪಂದನೆ

September 9, 2020

ಮೂಡುಬಿದಿರೆ: ದ್ವಿತೀಯ ಪಿ.ಯು.ಸಿ ಇತಿಹಾಸ ಪಠ್ಯ ಪುಸ್ತಕದಲ್ಲಿ ಜೈನ ಧರ್ಮ ಹಾಗೂ ಮಹಾವೀರರ ಬಗ್ಗೆ ತಪ್ಪು ಮಾಹಿತಿಗಳು ಪ್ರಕಟವಾಗಿದ್ದು ರಾಜ್ಯದ ಶಿಕ್ಷಣ ಸಚಿವರು ಈ ಬಗ್ಗೆ ತಕ್ಷಣ ಈ ಪಠ್ಯವನ್ನು ಶೈಕ್ಷಣಿಕ ವರ್ಷಾರಂಭದೊಳಗೆ ಸೂಕ್ತ ತಿದ್ದುಪಡಿ ಮಾಡಿ ಪ್ರಕಟಿಸುವ ಕ್ರಮ ಕೈಗೊಳ್ಳುವಂತೆ ಜೈನ ಸಮಾಜದ ಪರವಾಗಿ ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ªಸ್ವಾಮೀಜಿಯವರು ಮಾಡಿದ್ದ ಆಗ್ರಹಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಂದಿಸಿದ್ದಾರೆ.

ಮಂಗಳವಾರ ದೂರವಾಣಿ ಮೂಲಕ ಭಟ್ಟಾರಕ ಶ್ರೀಗಳವರ ಜೊತೆ ಮಾತನಾಡಿದ ಸಚಿವರು ಈ ಹಿಂದೆ ರಚನೆಯಾಗಿದ್ದ ಪಠ್ಯದಲ್ಲಿ ಆಗಿರುವ ಈ ಎಡವಟ್ಟುಗಳನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿಯೊಂದಿಗೆ ಪರಿಷ್ಕೃತ ಪಠ್ಯ ಪುಸ್ತಕದ ಮರು ಮುದ್ರಣಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ವಿವರ ನೀಡಿರುವ ಭಟ್ಟಾರಕ ಶ್ರೀಗಳವರು ಕೂಡಲೇ ಸ್ಪಂದಿಸಿರುವ ಸರ್ಕಾರ, ಮಾಧ್ಯಮ ಸಹಿತ ಮಾಜಿ ಸಚಿವ ಕೆ.ಅಭಯಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.