Call Us Now: 08272 221717

ಮೂಡುಬಿದಿರೆ ಎಬಿವಿಪಿ ವತಿಯಿಂದ ರಕ್ಷಾ ಬಂಧನ ಆಚರಣೆ

August 4, 2020

ಮೂಡುಬಿದಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡುಬಿದಿರೆ ತಾಲೂಕು ವತಿಯಿಂದ ಸೋಮವಾರ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಗರದ ಮೆಸ್ಕಾಂ ಇಲಾಖೆ ಹಾಗೂ ಅಗ್ನಿಶಾಮಕ ದಳದ ಕಚೇರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಸಿಬಂಧಿಗಳಿಗೆ ರಕ್ಷೆಯನ್ನು ಕಟ್ಟಿದರು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಶ್ರೀರಾಜ್ ಎಸ್.ಸನಿಲ್, ಉಪಾಧ್ಯಕ್ಷ ಹೇಮಂತ್ ಪೂಜಾರಿ, ನಗರ ಕಾರ್ಯದರ್ಶಿ ಧನಂಜಯ ಶೆಟ್ಟಿ, ಸಹ ಕಾರ್ಯದರ್ಶಿ ಆದರ್ಶ್ ಹಾಗೂ ನಗರದ ಎಬಿವಿಪಿ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.