Call Us Now: 08272 221717

ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕೆಲಸ ಜೂನ್ 10ರಂದು ಪ್ರಾರಂಭ

June 13,2020

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಜೂನ್ 10 ರಂದು ಪ್ರಾರಂಭವಾಗಲಿದೆ.

ಕಳೆದ ನವೆಂಬರ್‌ನಲ್ಲಿ ಪ್ರಕಟವಾದ ಐತಿಹಾಸಿಕ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ದೇವಾಲಯಕ್ಕೆ ಹಂಚಿಕೆಯಾಗಿರುವ ರಾಮ ಜನ್ಮಭೂಮಿ ತಾಣದಲ್ಲಿರುವ ಕುಬರ್ ತಿಲಾ ದೇಗುಲದಲ್ಲಿ ಪೂಜೆ‌ ನೆರವೇರಿಸಿ,ರುದ್ರ ಅಭಿಷೇಕದ ನಂತರ ಮಂದಿರ ನಿರ್ಮಾಣ ಕೆಲಸಕ್ಕೆ ಚಾಲನೆ‌ ನೀಡಲಾಗುವುದು. ಸಮಾರಂಭಕ್ಕೆ ಸೀಮಿತ ಸಂಖ್ಯೆಯಲ್ಲಿ‌ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಕ್ತಾರರು ತಿಳಿಸಿದ್ದಾರೆ.

ಟ್ರಸ್ಟ್ ಕಚೇರಿ ಕಾರ್ಯಾರಂಭ:

ಅಯೋಧ್ಯೆಯ ರಾಮ ದೇವಾಲಯ ನಿರ್ಮಾಣದ ನೇತೃತ್ವ ವಹಿಸಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಶಿಬಿರ ಕಚೇರಿ ಸೋಮವಾರ ಔಪಚಾರಿಕ ಪೂಜೆಯ ನಂತರ ಪ್ರಾರಂಭವಾಯಿತು.