Call Us Now: 08272 221717

ರಾಮಸೇನಾ ವತಿಯಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳಿಗೆ ಸನ್ಮಾನ

August 4, 2020

ಮೂಡುಬಿದಿರೆ: ಇಲ್ಲಿನ ಗುಡ್ಡೆಯಂಗಡಿಯ ರಾಮಸೇನಾ ಚಾಣಕ್ಯ ಘಟಕದ ವತಿಯಿಂದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ರಾಮಸೇನಾ ತಾಲೂಕು ಅಧ್ಯಕ್ಷ ಅಶೋಕ್‌ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ವೀಣಾ ಪ್ರಭು, ಶೋಭಾ ನಾಯ್ಕ್, ಸವಿತಾ ಆಚಾರ್ಯ, ಹೇಮಾವತಿ ಹಾಗೂ ಆರೋಗ್ಯ ಸಿಬ್ಬಂದಿಗಳಾದ ವಿಮಲಾ ಹಾಗೂ ಶುಭಲತಾ ಅವರನ್ನು ಸನ್ಮಾನಿಸಲಾಯಿತು.

ರಾಮಸೇನಾ ಚಾಣಕ್ಯ ಘಟಕದ ಅಧ್ಯಕ್ಷ ರವೀಶ್, ಹನುಮಾನ್ ಘಟಕದ ಅಧ್ಯಕ್ಷ ಉದಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.