Call Us Now: 08272 221717

ಮಾರೂರು: ದೈವನರ್ತಕ ರಮೇಶ್ ಪರವ ನಿಧನ

September 11, 2020

ಮೂಡುಬಿದಿರೆ: ಕಳೆದ 25 ವರ್ಷಗಳಿಂದ ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಪ್ರಮುಖ ದೈವನರ್ತಕರಾಗಿ ಗುರುತಿಸಿಕೊಂಡಿದ್ದ ಮಾರೂರಿನ ರಮೇಶ್ ಪರವ(45) ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಕೊಡಮಣಿತ್ತಾಯ, ಅಣ್ಣಪ್ಪ ಪಂಜುರ್ಲಿ ಸಹಿತ ರಾಜನ್ ದೈವಗಳ ದೈವನರ್ತಕರಾಗಿದ್ದರು.ನಾಟಕ ರಚನೆಗಾರರಾಗಿ, ರಂಗ ಕಲಾವಿದರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಅವರು ಜನ ಶಿಕ್ಷಣ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
2019ರ ಸೆಪ್ಟೆಂಬರ್ ತಿಂಗಳಲ್ಲಿ ರಮೇಶ್ ಪರವ ಅವರ ಸಹೋದರ, ದೈವನರ್ತಕ ವಾಸು ಪರವ ಅವರು ನಿಧನರಾಗಿದ್ದರು.