Call Us Now: 08272 221717

ರೋಟರಿ ಟೆಂಪಲ್‍ಟೌನ್‍ನಿಂದ ಹೈಟೆಕ್ ಸಿಸಿ ಕ್ಯಾಮರಾ ಅಳವಡಿಕೆ

August 6, 2020

ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್ ವತಿಯಿಂದ ನಿಶ್ಮಿತಾ ಟವರ್ಸ್ ಬಳಿ ಸುಮಾರು 60 ಸಾವಿರ ರೂ ವೆಚ್ಚದಲ್ಲಿ ಹೈಟೆಕ್ ಸಿಸಿ ಕ್ಯಾಮರಾ ಅಳವಡಿಸಿದ್ದು ರೋಟರಿ 3181ನ ಜಿಲ್ಲಾ ರಾಜ್ಯಪಾಲ ರಂಗನಾಥ ಭಟ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮೂಡುಬಿದಿರೆ ತಾಲೂಕು ಕೇಂದ್ರವಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ಇಲ್ಲಿನ ಪೇಟೆಗೆ ಅತ್ಯಗತ್ಯವಾದ ಅತ್ಯಾಧುನಿಕ ಸಿಸಿ ಕ್ಯಾಮರಾವನ್ನು ರೋಟರಿ ಕ್ಲಬ್ ಟೆಂಪಲ್‍ಟೌನ್ ಒದಗಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಇಂತಹ ಕೆಲಸಗಳು ಸದಾ ನಡೆಯಲಿ ಎಂದು ಆಶಿಸಿದರು.
ರೋಟರಿ 3181ರ ಕಾರ್ಯದರ್ಶಿ ರಂಗನಾಥ ಕಿಣಿ, ಉಪರಾಜ್ಯಪಾಲ ಡಾ.ಯತಿಕುಮಾರ ಸ್ವಾಮಿಗೌಡ, ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ.ಎಸ್, ಜಿಎಸ್‍ಆರ್ ಡಾ.ಹರೀಶ್ ನಾಯಕ್, ರೋಟರಿ ಟೆಂಪಲ್ ಟೌನ್‍ನ ಮಾಜಿ ಅಧ್ಯಕ್ಷರುಗಳಾದ ಯುವರಾಜ ಜೈನ್, ಉಮೇಶ್‍ರಾವ್, ರಾಜೇಶ್ ಬಂಗೇರ, ವಿನ್ಸೆಂಟ್ ಡಿಕೋಸ್ತ, ಡಾ.ಮಹಾವೀರ ಜೈನ್, ರೋಟರಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಾರಾಯಣ ಪಿ.ಎಂ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಸುದೀಪ್ ಜೈನ್ ಭಾಗವಹಿಸಿದರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್‍ನ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ವಂದಿಸಿದರು.