Call Us Now: 08272 221717

ರೋಟರಿ‌ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್ನಿಂದ ಕಾರ್ಗಿಲ್ ವಿಜಯೋತ್ಸವ

July 31, 2020

ಮೂಡುಬಿದಿರೆ : ಇಲ್ಲಿನ ರೋಟರಿ ಕ್ಲಬ್ ಟೆಂಪಲ್ ಟೌನ್ ವತಿಯಿಂದ ಕಾರ್ಗಿಲ್ ವಿಜಯೋತ್ಸವವು ರೋಟರಿ ಟೆಂಪಲ್‌ಟೌನ್ ಪಾರ್ಕ್ನಲ್ಲಿ ನಡೆಯಿತು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರಾದ ಸುಬೇದಾರ್ ಭಾಸ್ಕರ್, ಎ. ಪಿ. ಅಶೋಕ್ ಪ್ರಭು ಹಾಗೂ ನವಾನಂದ ಅವರು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ನೆನಪುಗಳನ್ನು ತೆರೆದಿಟ್ಟರು.

ರೋಟರಿ ಜಿಲ್ಲಾ ಉಪರಾಜ್ಯಪಾಲ ಡಾ. ಯತಿಕುಮಾರ್ ಸ್ವಾಮಿ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿ ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಝೋನಲ್ ಲೆಫ್ಟಿನೆಂಟ್ ಬಲರಾಮ ಕೆ.ಎಸ್., ಮಾಜಿ ಅಧ್ಯಕ್ಷರುಗಳಾದ ಉಮೇಶ್ ರಾವ್, ವಿನ್ಸೆಂಟ್ ಡಿ’ಕೋಸ್ತ, ಡಾ.ಮಹಾವೀರ ಜೈನ್ ಉಪಸ್ಥಿತರಿದ್ದರು.

ಡಾ. ಅಮರ್‌ದೀಪ್ ಸನ್ಮಾನಿತ ಯೋಧರನ್ನು ಪರಿಚಯಿಸಿದರು. ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ವಂದಿಸಿದರು.