Call Us Now: 08272 221717

ರೋಟರಿ ಮೂಡುಬಿದಿರೆ ಟೆಂಪಲ್ ಟೌನ್ನಿಂದ ಮಠ – ದೇವಳಕ್ಕೆ ಸ್ಯಾನಿಟೈಸರ್ ಸಾಧನ ಕೊಡುಗೆ

June 14, 2020

ಮೂಡುಬಿದಿರೆ : ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್‌ಟೌನ್ ಇದರ ವತಿಯಿಂದ ಜೈನ ಮಠ ಮತ್ತು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸ್ಯಾನಿಟೈಸರ್ ಸಾಧನವನ್ನು ಕೊಡುಗೆಯಾಗಿ ನೀಡಲಾಯಿತು. ಜೈನ ಮಠದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಹಾಗೂ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಸ್ವೀಕರಿಸಿದರು.

ರೋಟರಿ ಕ್ಲಬ್ ಟೆಂಪಲ್‌ಟೌನ್‌ನ ಅಧ್ಯಕ್ಷ ಡಾ. ಮಹಾವೀರ ಜೈನ್, ಕಾರ್ಯದರ್ಶೀ ಹರೀಶ್ ಎಂ. ಕೆ. , ನಿಯೋಜಿತ ಅಧ್ಯಕ್ಷಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪೂರ್ಣಚಂದ್ರ ಜೈನ್, ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ.ಎಸ್. ಉಪಸ್ಥಿತರಿದ್ದರು