Call Us Now: 08272 221717

ಸಾಣೂರು ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕೋತ್ಸವ, ಪದಗ್ರಹಣ

September 10, 2020

ಕಾರ್ಕಳ: ಶಾಂಭವಿ ಕಲಾವಿದೆರ್ ಸಾಣೂರು ತಂಡದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಾಣೂರು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನ ನಂದ್ರೊಟ್ಟುವಿನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನ ಅಧ್ಯಕ್ಷ ಯುವರಾಜ್ ಜೈನ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ , ರಂಗ ಕಲಾವಿದ ಚಂದ್ರಹಾಸ್ ಪೂಜಾರಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಗೌರವ ಅಧ್ಯಕ್ಷರಾಗಿ ಭಾಸ್ಕರ್ ಪೂಜಾರಿ, ಸಂಚಾಲಕರಾಗಿ ಸಂತೋಷ್ ಬಂಗೇರ , ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಸಾಣೂರು, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್ ,ಸಂತೋಷ್ ಎಸ್.ಡಿ, ಕಾರ್ಯದರ್ಶಿಯಾಗಿ ಪ್ರಮಿತ್ ಸಾಣೂರು ,ಜೊತೆ ಕಾರ್ಯದರ್ಶಿಯಾಗಿ ರಾಜ್ ಪೂಜಾರಿ, ದೀಕ್ಷಿತ್ ಕುಮಾರ್,ಕೋಶಾಧಿಕಾರಿ ಯಾಗಿ ಶರತ್ ದೇವಾಡಿಗ , ಆರ್.ಕೆ ರಂಜಿತ್ ಸುವರ್ಣ,ಸಂಘಟಕರು ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಂದ್ರ ಕುಮಾರ್ ಸಾಣೂರು,ಸಂದೇಶ್ ಮುರತಂಗಡಿ,ಮುಕೇಶ್ ದೇವಾಡಿಗ ,ಅರುಣ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.

ಆರ್.ಕೆ ಬೆಳುವಾಯಿ ,ಸುರೇಶ್ ಕುಲಾಲ್ ಸಾಣೂರು ಉಪಸ್ಥಿತರಿದ್ದರು.