Call Us Now: 08272 221717

ದ.ಕ ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ ಘಟಕದ ವಾರ್ಷಿಕ ಸಭೆ

September 22, 2020

ಮೂಡುಬಿದಿರೆ: ಕೊರೊನಾ ಹಿನ್ನೆಲೆಯಲಿ ಸರ್ಕಾರ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಿದ್ದರಿಂದ ಶಾಮಿಯಾನ ಮಾಲಕರು, ನೌಕರರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಉದ್ಯಮದ ಪುನಶ್ಚೇತನಕ್ಕಾಗಿ ಮುಂದಿನ ನವರಾತ್ರಿ ಉತ್ಸವ ಸೇರಿದಂತೆ ಸಾರ್ವಜನಿಕ, ಖಾಸಗಿ ಕಾರ್ಯಕ್ರಮಗಳಲ್ಲಿ ಕನಿಷ್ಟ 500 ಜನರು ಪಾಲ್ಗೊಳ್ಳಲು ಸರ್ಕಾರ ಅನುಮತಿ ನೀಡಬೇಕು ಎಂದು ದ.ಕ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ ಹೇಳಿದರು.

ಸಮಾಜ ಮಂದಿರದಲ್ಲಿ ನಡೆದ ಘಟಕದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ರೈತರಿಗೆ, ಕೆಲವು ವರ್ಗದ ಕಾರ್ಮಿಕರಿಗೆ ಸರ್ಕಾರ ಕೋವಿಡ್ ಪರಿಹಾರವನ್ನು ನೀಡಿದಂತೆ ಶಾಮಿಯಾನ ನೌಕರರಿಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ನಮ್ಮ ನ್ಯಾಯೋಚಿತ ಹಕ್ಕುಗಳನ್ನು ಪಡೆಯಲು ಎಲ್ಲಾ ಕಡೆ ಘಟಕವನ್ನು ಗಟ್ಟಿಗೊಳಿಸಿ ಸಂಘಟಿತರಾಗಬೇಕು ಎಂದರು.
ಬಂಟ್ವಾಳ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಕಾರ್ಯದರ್ಶಿ ಮ್ಯಾಕ್ಸಿಂ ಸಿಕ್ವೇರಾ, ಮಂಗಳೂರು ಘಟಕದ ಯುವರಾಜ್, ಮೂಡುಬಿದಿರೆ ಘಟಕದ ಅಧ್ಯಕ್ಷ ಗಣೇಶ್ ಕಾಮತ್, ಗೌರವ ಅಧ್ಯಕ್ಷ ಗಂಗಾಧರ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು. ಗಣಪತಿ ಪೈ ಸ್ವಾಗತಿಸಿದರು. ಸುರೇಶ್ ದೇವಾಡಿಗ ನಿರೂಪಿಸಿದರು.