Call Us Now: 08272 221717

ಶಿರ್ತಾಡಿ, ಮೂಡುಮಾರ್ನಾಡಿನಲ್ಲಿ 1.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ

October 8, 2020

ಮೂಡುಬಿದಿರೆ: ಮೂಡುಮಾರ್ನಾಡಿನಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಕಾಸನ್‍ಬೆಟ್ಟು ರಸ್ತೆ ಅಭಿವೃದ್ಧಿ ಮತ್ತು ಸುಮಾರು 50 ಲಕ್ಷ ವೆಚ್ಚದಲ್ಲಿ ಶಿರ್ತಾಡಿಯಿಂದ ಓಡದಕರಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿ ಪೂಜೆ ನೆರವೇರಿಸಿದರು.


ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ ಸುಜಾತ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗವೇಣಿ, ಪ್ರಶಾಂತ್ ಮತ್ಲ್‍ಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಾಥ್ ಸುವರ್ಣ, ಲತಾ ಪಿ.ಹೆಗ್ಡೆ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಬಿಜೆಪಿ ಮುಕಂಡರಾದ ಸುಖೇಶ್ ಶೆಟ್ಟಿ, ದಿವ್ಯವರ್ಮ, ರಾಜೇಶ್ ಸುವರ್ಣ, ಪಿಡಬ್ಲ್ಯುಡಿ ಎಂಜಿನಿಯರ್ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.