Call Us Now: 08272 221717

ಶಿರ್ತಾಡಿ ಚರ್ಚ್ ಬಳಿ ಹೈಮಾಸ್ಟ್ ದೀಪ ಉದ್ಘಾಟನೆ

October 12, 2020

ಮೂಡುಬಿದಿರೆ: ಶಿರ್ತಾಡಿ ಗ್ರಾಮದ ಮೌಂಟ್ ಕಾರ್ಮೆಲ್ ಚರ್ಚಿನ ಮುಂಭಾಗ,ತನ್ನ ಅನುದಾನದಿಂದ ಒದಗಿಸಿದ್ದ ಹೈ ಮಾಸ್ಕ್ ವಿದ್ಯುತ್ ದೀಪವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ ಉದ್ಘಾಟಿಸಿದರು.
ಚರ್ಚ್‍ನ ಧರ್ಮಗುರು ವಂದನೀಯ ಹೆರಾಲ್ಡ್ ಮಸ್ಕರೇನಸ್ ಅವರು ಐವನ್ ಡಿಸೋಜ ಅವರನ್ನು ಸನ್ಮಾನಿಸಿದರು.

ಶಿರ್ತಾಡಿ ಗ್ರಾಪಂ ಮಾಜಿ ಸದಸ್ಯರಾದ ಪ್ರವೀಣ್ ಕುಮಾರ್, ವಿವಿಯನ್ ಪಿಂಟೊ, ಅರುಣ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಪದ್ಮ ಪ್ರಸಾದ್, ವಿಲ್ಫ್ರೆಡ್ ಮೆಂಡೊನ್ಸಾ, ಆಲ್ವಿನ್ ಮಿನೇಜಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಸ್ಟಿನ್ ಡೇಸಾ, ಮುಖಂಡ ವಿಲ್ಫ್ರೆಡ್ ಪಿಂಟೊ, ಪ್ರವೀಣ್ ಮೆಂಡೊನ್ಸಾ, ಜೈಸನ್ ಪಿರೇರಾ, ಜೋಯೆಲ್ ಸಿಕ್ವೇರಾ ಉಪಸ್ಥಿತರಿದ್ದರು.