Call Us Now: 08272 221717

ಅಮ್ಮನ ಶ್ರಮಕ್ಕೆ ಸಾಥ್ ನೀಡಿದ ಮಕ್ಕಳು: ಬೆದ್ರದಲ್ಲಿ ಸ್ಕಂದ ಆಗ್ರ್ಯಾನಿಕ್ಸ್ & ಜಿ.ಎನ್ ಭಟ್ ಪಿಕಲ್ಸ್ ಶುಭಾರಂಭ

August 30, 2020

ಮೂಡುಬಿದಿರೆ: ಹಲವಾರು ವರ್ಷಗಳಿಂದ ಉಪ್ಪಿನಕಾಯಿ ಹಾಗೂ ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಮೂಡುಬಿದಿರೆ ಹಾಗೂ ಅಸುಪಾಸಿನ ಊರುಗಳಲ್ಲಿ ಮನೆಮಾತಾಗಿರುವ ಸ್ವಾವಲಂಬಿ ಮಹಿಳೆ ಕಲಾವತಿಯವರ ಸ್ಕಂದ ಆಗ್ರ್ಯಾನಿಕ್ಸ್ ಹಾಗೂ ಜಿ.ಎನ್ ಭಟ್ ಪಿಕಲ್ಸ್ ಮಳಿಗೆ ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯ ಬಳಿ ಇರುವ ಸತ್ಯನಾರಾಯಣ ದೇವಸ್ಥಾನದ ಎದುರು ಭಾನುವಾರ ಶುಭಾರಂಭಗೊಂಡಿದೆ.

ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರು ನೂತನ ಮಳಿಗೆಯಲ್ಲಿ ಪೂಜೆ ನೆರವೇರಿಸಿದರು. ಧನಲಕ್ಷಿ ಸಮೂಹ ಸಂಸ್ಥೆಯ ಮಾಲೀಕರಾದ ಕೆ.ಶ್ರೀಪತಿ ಭಟ್ ಉದ್ಘಾಟಿಸಿದರು.

ಕಲಾವತಿ ಪುತ್ರ ಸ್ಕಂದ ಪ್ರಸಾದ್ ಹಾಗೂ ಪುತ್ರಿ ಪೂಜಾ ಅವರು, ಮೋದಿಯವರ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಪ್ರೇರಿತರಾಗಿ ಮಳಿಗೆಯನ್ನು ಸ್ಥಾಪಿಸಿದ್ದಾರೆ. ತಾಯಿಯ ಶ್ರಮದ ಅರಿವು, ಅವರೊಟ್ಟಿಗೆ ತಮ್ಮ ಪದವಿ ವ್ಯಾಸಂಗದವರೆಗೆ ನೆರವಿಗೆ ನಿಂತ ನೆನಪುಗಳಿಗೆ ಮಳಿಗೆ ರೂಪು ನೀಡಿದ್ದಾರೆ. ಮನೆಯಲ್ಲೇ ತಯಾರಿಸಿದ ಶುಚಿ-ರುಚಿಯಾದ ಉಪ್ಪಿನಕಾಯಿ ಹಾಗೂ ಇನ್ನಿತರ ಸಾವಯವ ಆಹಾರ ಪದಾರ್ಥಗಳು ಹೋಲ್‍ಸೇಲ್ ಹಾಗೂ ರಿಟೇಲ್ ದರದಲ್ಲಿ ಒದಗಿಸುವ ವ್ಯವಸ್ಥೆ ಮಳಿಗೆಯಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ-8660964721 ಹಾಗೂ 9480776999 ಮೂಲಕ ಸಂಪರ್ಕಿಸಬಹುದಾಗಿದೆ.