Call Us Now: 08272 221717

ಮೂಡುಬಿದಿರೆ ಶ್ರೀ ಮಹಾವೀರ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ online ವಿಚಾರ ಸಂಕಿರಣ

June 26, 2020

ಮೂಡುಬಿದಿರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಆಶ್ರಯದಲ್ಲಿ ‘ಆನ್‍ಲೈನ್ ಬೋಧನೆಯು ತರಗತಿ ಬೋಧನೆಗೆ ಪೂರಕವೇ ಅಥವಾ ಪರ್ಯಾಯವೇ’ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಮಟ್ಟದ ಅಂತರ್ಜಾಲ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.

ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ರಿಜಿಸ್ಟ್ರಾರ್ ಡಾ. ಎ.ಎಂ. ನರಹರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಚಾರ ಸಂಕಿರಣದ ಸಂಘಟಕ ಡಾ. ಪ್ರವೀಣ್ ಕೆ. ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ಡಾ. ಅಜಾಜ್ ಅಹಮದ್ ಸಂಪನ್ಮೂಲ ವ್ಯಕ್ತಿಯವರ ಪರಿಚಯ ನೀಡಿದರು.ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ದೀಕ್ಷಿತ್ ವಂದಿಸಿದರು.

ದೇಶದ ವಿವಿಧ ರಾಜ್ಯಗಳ 350 ಅಧ್ಯಾಪಕರು ಈ ಸಂಕಿರಣದಲ್ಲಿ ಭಾಗವಹಿದ್ದರು.