Call Us Now: 08272 221717

ಮೂಡುಬಿದಿರೆ: ಹೃದಯಾಘಾತದಿಂದ ಯುವ ಉದ್ಯಮಿ ಸಾವು

June 26, 2020

ಮೂಡುಬಿದಿರೆ: ಯುವ ಉದ್ಯಮಿ, ಮೂಡುಬಿದಿರೆ ಅಲಂಗಾರು ನಿವಾಸಿ ಸುನೀಲ್ ಪ್ರಭು (42)ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೂಡುಬಿದಿರೆ ಪೇಟೆಯಲ್ಲಿ ಸಹೋದರನ ಜೊತೆ
ಓಂಕಾರ್ ಸರ್ವೀಸಸ್‌ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಸುನೀಲ್ ಪ್ರಭು ಗುರುವಾರ ರಾತ್ರಿ ಊಟ ಮಾಡಿ ಮಲಗಿದ್ದು, ಶುಕ್ರವಾರ ಬೆಳಗ್ಗೆ ಮೃತಪಟ್ಟಿರುವುದು ಮನೆಯವರ ಗಮನಕ್ಕೆ ಬಂದಿದೆ.

ಅವಿವಾಹಿತರಾಗಿದ್ದ ಅವರಿಗೆ ತಂದೆ, ತಾಯಿ ಇದ್ದಾರೆ.