Call Us Now: 08272 221717

SSLC: ಮೂಡುಬಿದಿರೆಯ ಐದು ಕೇಂದ್ರಗಳಲ್ಲಿ 1,794 ಪರೀಕ್ಷಾರ್ಥಿಗಳು

June 26,2020

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಆರಂಭದ ದಿನವಾದ ಗುರುವಾರ ಮೂಡುಬಿದಿರೆ ವಲಯದ 30 ಪ್ರೌಢಶಾಲೆಗಳಿಂದ 1794 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಎಲ್ಲ ಪರೀಕ್ಷಾರ್ಥಿಗಳಿಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ , ಸ್ಕೌಟ್ಸ್ ಗೈಡ್ಸ್ ನಿಂದ ತಲಾ 2,000, ಜಿ. ಶಂಕರ್ ಟ್ರಸ್ಟ್ 1,500 ಮಾಸ್ಕ್‍ಗಳನ್ನು ಒದಗಿಸಲಾಗಿದೆ.

ಪರೀಕ್ಷಾ ಕೊಠಡಿಗೆ ಹೋಗುವ ಮುನ್ನವಿದ್ಯಾರ್ಥಿಗಳ ಸ್ಯಾನಿಟೈಸೇಶನ್, ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗಿದೆ. ಶಿಕ್ಷಣ ಇಲಾಖೆ 11, ಆಳ್ವಾಸ್ 15 ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳನ್ನು ಒದಗಿಸಿವೆ. ಆವರಣದಲ್ಲಿ, ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಸ್ಯಾನಿಟೈಸೇಶನ್ ನಡೆಸಲಾಗಿದ್ದು ಮೂಡುಬಿದಿರೆ ಪುರಸಭೆ, ಪುತ್ತಿಗೆ ಹಾಗೂ ಶಿರ್ತಾಡಿ ಪಂ. ತಮ್ಮ ವಲಯದ ಕೇಂದ್ರಗಳಲ್ಲಿ ಪ್ರತಿದಿನ ಪರೀಕ್ಷೆಗೆ ಮುನ್ನ ಹಾಗೂ ಬಳಿಕ ಸ್ಯಾನಿಟೈಸ್ ಮಾಡಲಾಗುತ್ತಿವೆ.

ಪರೀಕ್ಷಾ ಕೇಂದ್ರಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯವರು 21 ಬಸ್‍ಗಳನ್ನು ಒದಗಿಸಿದ್ದು ಇತರ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ಸುಗಳೂ ಬಳಕೆಯಾಗಿವೆ. ಪ್ರತಿಯೊಂದು ಕೇಂದ್ರಕ್ಕೆ ಸ್ಕೌಟ್‍ಗೈಡ್ಸ್‍ನಿಂದ 10 ಮಂದಿ ಹಾಗೂ ತಲಾ ಒಬ್ಬರು ಪೊಲೀಸ್ ಸಿಬಂದಿಯನ್ನೂ ಮೊಬೈಲ್ ವಶ ಪಡಿಸಿಕೊಳ್ಳುವ ಅಧಿಕಾರಿಯನ್ನೂ ನಿಯೋಜಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾ„ಕಾರಿ ರಾಜಶ್ರೀ ಬಿ., ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕಸ್ಟೋಡಿಯನ್ ಶಿವಾನಂದ ಕಾಯ್ಕಿಣಿ ಮತ್ತಿತರ ಅಧಿಕಾರಿಗಳು ಸಮಗ್ರ ಉಸ್ತುವಾರಿ ನಡೆಸಿದರು.