Call Us Now: 08272 221717

ಮೂಡುಬಿದಿರೆಯಲ್ಲಿ ಸ್ಟಾರ್ ರೈಡರ್ಸ್-ಮಲ್ಟಿಬ್ರ್ಯಾಂಡ್ ಸೈಕಲ್ ಮಳಿಗೆ ಶುಭಾರಂಭ

October 8, 2020

ಮೂಡುಬಿದಿರೆ: ಮಲ್ಟಿಬ್ರ್ಯಾಂಡ್ ಸೈಕಲ್‍ಗಳನ್ನು ಒಳಗೊಂಡ ಸುಸಜ್ಜಿತ ಮಳಿಗೆ ಸ್ಟಾರ್ ರೈಡರ್ಸ್ ಅನ್ನು ಮೂಡುಬಿದಿರೆ ಬಡಗಬಸದಿಯ ಬಳಿಯಿರುವ ಫಾರ್ಚೂನ್ ಹೈವೇ ವಾಣಿಜ್ಯ ಸಂರ್ಕೀರ್ಣದಲ್ಲಿ ಬುಧವಾರ ಉದ್ಘಾಟಿಸಲಾಯಿತು.


ಅಲಂಗಾರು ಹೋಲಿ ರೋಸರಿ ಚರ್ಚ್‍ನ ಧರ್ಮಗುರು ಫಾ.ವಾಲ್ಟರ್ ಡಿಸೋಜ, ಕಾವೂರು ಸೈಂಟ್ ಅಂಥೋನಿ ಚರ್ಚ್‍ನ ಧರ್ಮಗುರು ವಿನ್ಸೆಂಟ್ ಡಿಸೋಜ, ಫಜೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್‍ನ ಧರ್ಮಗುರು ಫಾ.ಸುನೀಲ್ ವೇಗಸ್ ಆಶೀರ್ವಚನ ನೀಡಿದರು.


ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಳಿಗೆಯನ್ನು ಉದ್ಘಾಟಿಸಿದರು.
ಕೆ.ಅಭಯಚಂದ್ರ ಜೈನ್ ಪ್ರಥಮ ಗ್ರಾಹಕರಾಗಿ ಸೈಕಲ್ ಖರೀದಿಸಿದರು. ಬಳಿಕ ಮಾತನಾಡಿದ ಅವರು, ಸೈಕಲ್ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುವ ವಾಹನ. ಇಂದು ಅದು ಟ್ರೆಂಡ್ ಆಗಿ, ಫ್ಯಾಶನ್ ಆಗಿ ಎಲ್ಲ ವರ್ಗದ, ಎಲ್ಲ ವಯೋಮಾನದ ಜನರು ಸೈಕಲ್ ಅನ್ನು ಖರೀದಿಸಿ ಬಿಡುತ್ತಿದ್ದಾರೆ. ಸೈಕಲ್ ರೈಡಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಸೈಕಲ್ ರೈಡಿಂಗ್ ಮಾಡುವ ಕ್ರೇಜ್ ಹೆಚ್ಚಾಗುತ್ತಿದೆ. ಮೂಡುಬಿದಿರೆಯಲ್ಲೂ ಕ್ರೇಜ್ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಇಲ್ಲಿ ಸುಸಜ್ಜಿತ ಮಲ್ಟಿ ಬ್ರಾಂಡ್ ಶೋರೂಂ ಅನ್ನು ವಲೇರಿಯನ್ ಸಿಕ್ವೇರಾ ಕುಟುಂಬದವರು ಸ್ಥಾಪಿಸಿರುವುದು ಸಕಾಲಿಕ. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು.


ಪುರಸಭೆ ಸದಸ್ಯರಾದ ಪಿ.ಕೆ ಥೋಮಸ್¸, ಸುರೇಶ್ ಕೋಟ್ಯಾನ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಕಥೋಲಿಕ್ ಸಭಾದ ಅಧ್ಯಕ್ಷ ವಿಕ್ಟರ್ ಕಡಂದಲೆ, ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ವಸಂತ್ ಬರ್ನಾಡ್, ಮೋನಪ್ಪ ಶೆಟ್ಟಿ ಎಕ್ಕಾರ್ ಮುಖ್ಯ ಅತಿಥಿಯಾಗಿದ್ದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಅವರ ಪುತ್ರ, ಸ್ಟಾರ್ ರೈಡರ್ಸ್ ಸಂಸ್ಥೆಯ ಮಾಲೀಕ ರೀವನ್, ಕುಟುಂಬಸ್ಥರಾದ ಬೆನಡಿಕ್ಟಾ ಸಿಕ್ವೇರಾ, ಜೆರಾಲ್ಡ್ ಡಿಸೋಜ, ಶೋಭಾ, ರೀಮಲ್ ಉಪಸ್ಥಿತರಿದ್ದರು.