Call Us Now: 08272 221717

ಮೂಡುಬಿದಿರೆ: ಮಹಿಳಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷೆ ಸ್ಟೆಲ್ಲಾ ವಾಸ್ ನಿಧನ

October 14, 2020

ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟೆ ನಿವಾಸಿ ದಿ.ಎಡ್ವಿನ್ ವಾಸ್ ಅವರ ಪತ್ನಿ ಹಿರಿಯ ಸಮಾಜ ಸೇವಕಿ ಸ್ಟೆಲ್ಲಾ ವಾಸ್ (82ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.

ಅವರು ನಾಲ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರವಾಸೋದ್ಯಮ ಸಂಬಂಧಿ ಉದ್ಯೋಗಿಯಾಗಿದ್ದ ಅವರು ಬಳಿಕ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತೆಯಾಗಿ, ಮೂಡುಬಿದಿರೆಯಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿ ಸರ್ಕಾರಿ ಸೌಲಭ್ಯಗಳನ್ನು ದುರ್ಬಲರಿಗೆ ತಲುಪಿಸುವಲ್ಲಿ ಕಾಳಜಿ ವಹಿಸಿದ್ದರು. ಅಶಕ್ತರ, ನಿರ್ಗತಿಕರ ಬಗ್ಗೆ ವಿಶೇಷವಾಗಿ ಶ್ರಮಿಸಿ ಜನಾನುರಾಗಿಯಾಗಿದ್ದರು.