Call Us Now: 08272 221717

ದುಬೈ ಕಾರ್ ರೇಸ್: ಮೂಡುಬಿದಿರೆಯ ಯುವಕನಿದ್ದ ಭಾರತ ತಂಡಕ್ಕೆ ತೃತೀಯ ಸ್ಥಾನ

September 19, 2020

ಮೂಡುಬಿದಿರೆ: ದುಬೈನಲ್ಲಿ ನಡೆದ `ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್2020′ ಕಾರ್ ರೇಸ್‍ನಲ್ಲಿ ಮೂಡುಬಿದಿರೆಯ ಯವಕನಿದ್ದ ಭಾರತ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

ಗುರುವಾರ ದುಬೈನಲ್ಲಿ 6 ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್ ಕಾರ್ ರೇಸ್‍ನಲ್ಲಿ ಭಾರತ ದೇಶದ ಐವರು ಚಾಲಕರನ್ನೊಳಗೊಂಡ ತಂಡ ಭಾಗವಹಿಸಿತ್ತು. ಕೊಲ್ಕತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಚಿಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಮೂಡುಬಿದಿರೆ ಕೋಟೆಬಾಗಿಲಿನ ಸುಹೈಬ್ ಆಲಿ(24) ಒಬ್ಬರಾಗಿದ್ದರು.
ಸುಹೈಬ್ ಆಲಿ ಅವರು ದ. ಕ. ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ. ಕೆ. ಅಬೂಬಕ್ಕರ್ ಅವರ ಪುತ್ರರಾಗಿದ್ದಾರೆ. ಅವರು ಆಳ್ವಾಸ್ ಇಚಿಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿರುವ ಅಮೇರಿಕನ್ ಮೂಲದ ಬಿಟೆಕ್ನಾಲಜಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.