Call Us Now: 08272 221717

ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ

June 26,2020

ಮೂಡುಬಿದಿರೆ: ಕೊರೋನಾ ಲಾಕ್‍ಡೌನ್‍ನಿಂದಾಗಿ ನಗರದ ಬೀದಿ ವ್ಯಾಪಾರಿಗಳು ತಮ್ಮ ಜೀವನೋಪಾಯದ ಹಾದಿಯಲ್ಲಿ ಸಂಕಷ್ಟ ದಿನಗಳನ್ನು ಎದುರಿಸುತ್ತಿರುವುದರಿಂದ ಸದರಿಯವರ ನೆರವಿಗಾಗಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭಾರ್ ನಿಧಿಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿರುತ್ತದೆ.
ಸದರಿ ಯೋಜನೆಯನ್ವಯ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಪ್ರದೇಶದಲ್ಲಿರತಕ್ಕ ಗುರುತು ಚೀಟಿ ಹೊಂದಿರುವ ಬೀದಿ ಬದಿ ವ್ಯಾಪಾರಸ್ಥರು ಇದರ ಸದುಪಯೋಗಪಡೆಯಬಹುದಾಗಿದೆ. ಅದರಂತೆ ಈ ತಿಂಗಳ ಜೂನ್ 30 ರೊಳಗಾಗಿ ಪುರಸಭಾ ಕಛೇರಿಗೆ ಅರ್ಜಿ ಸಲ್ಲಿಸುವಂತೆ
ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.