Call Us Now: 08272 221717

ಮೂಡುಬಿದಿರೆ ತಾಲೂಕು ಪಂಚಾಯತ್ ಕಚೇರಿ ಉದ್ಘಾಟನೆ

July 7, 2020

ಮೂಡುಬಿದಿರೆ: ಹೊಸದಾಗಿ ರಚನೆಗೊಂಡ ತಾಲೂಕು ಪಂಚಾಯತ್ ಕಚೇರಿಯನ್ನು ಇಲ್ಲಿನ ಬಸ್ ನಿಲ್ದಾಣದ ಬಳಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಥರ್ಡ್( ಲೇಬರ್ ಸ್ಕೂಲ್) ಆವರಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಉದ್ಘಾಟಿಸಿ ಶುಭ ಹಾರೈಸಿದರು.
ಜಿ.ಪಂ, ಉಪಾಧ್ಯಕ್ಷೆ ಕಸ್ತೂರಿ ಪಂಜ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಜಿ.ಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಮಂಗಳೂರು ತಾಲೂಕು ನಿರ್ವಹಣಾಧಿಕಾರಿ ಸದಾನಂದ, ತಾ.ಪಂ. ಸದಸ್ಯರು, ಯುವಜನ ಸೇವೆ, ಕ್ರೀಡಾ ಇಲಾಖೆಯ ಸಹಾಯಕ ಕ್ರೀಡಾಧಿಕಾರಿ ಶಿವಾನಂದ ಕಾಯ್ಕಿಣಿ, ಜಿ.ಪಂ. ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರಪುಲ್ಲಾ ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.