Call Us Now: 08272 221717

ಅಗಸ, ಕ್ಷೌರಿಕರಿಗೆ ಸರ್ಕಾರದಿಂದ ₹ 5 ಸಾವಿರ: ನೋಂದಣಿಗೆ ಅವಕಾಶ

June 27,2020

ಮೂಡುಬಿದಿರೆ: ಕೋವಿಡ್-19ರ ನಿಯಂತ್ರಣಕ್ಕೆ ಘೋಷಿಸಿದ ಲಾಕ್ ಡೌನ್ ಕಾರಣ ಆರ್ಥಿಕ ಸಂಕಷ್ಟಕ್ಕೊಳಗಾದ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಒಂದು ಬಾರಿ ರೂ.5,000/-ಗಳ ನೆರವನ್ನು ಸನ್ಮಾನ್ಯ ಮುಖ್ಯ ಮಂತ್ರಿಯವರು ಘೋಷಿಸಿದ್ದು, ಮೂಡುಬಿದಿರೆ ಅರ್ಹ ಫಲಾನುಭವಿಗಳು, ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮೂಡಬಹುದಾಗಿದೆ ಎಂದು ತಹಸೀಲ್ದಾರ್ ಅನಿತಾ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌಲಭ್ಯವನ್ನು ಪಡೆಯಲು ಅರ್ಹತೆಗಳು /ಷರತ್ತುಗಳು:

* ಫಲಾನುಭವಿಯು ಕಡ್ಡಾಯವಾಗಿ ಕ್ಷೌರಿಕ ಅಥವಾ ಆಗಸದ ವೃತ್ತಿಯಲ್ಲಿ ತೊಡಗಿರಬೇಕು.

* ವಯೋಮಿತಿ 18 ರಿಂದ 65 ವರ್ಷಗಳಿಗೆ ಸೀಮಿತ

* ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಮಾತ್ರ ಅನ್ವಯ

* ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಪರಿಹಾರ ಪಡೆಯಬಹುದಾಗಿರುತ್ತದೆ

* ಕರ್ನಾಟಕದಲ್ಲಿ ಅಗಸ/ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರು ಸಹ ಪರಿಹಾರವನ್ನು ಪಡೆಯಲು ಅರ್ಹರು (ಕರ್ನಾಟಕ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಮಾತ್ರ).

*ಎಲ್ಲಾ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸತಕ್ಕದ್ದು.

*ಸ್ವಯಂ ಘೋಷಣೆಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಅಪ್ಲೋಡ್ ಮಾಡುವುದು.

* ಅಗಸ/ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಕುರಿತು ನಿಗದಿಪಡಿಸಿದ ನಮೂನೆಯಲ್ಲಿ ಉದ್ಯೋಗ ದೃಢೀಕರಣ ಪತ್ರವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದು ಅಪ್ಲೋಡ್ ಮಾಡುವುದು.

* ಅರ್ಜಿ ಸಲ್ಲಿಸಲು ಫಲಾನುಭವಿಗಳು ವ್ಯಾಲಿಡ್ ಮೊಬೈಲ್ ಸಂಖ್ಯೆ ಹೊಂದಿರತಕ್ಕದ್ದು.

* ಮಹಿಳಾ ಫಲಾನುಭವಿಗಳು ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ದಲ್ಲಿ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇದನ್ನು ಹೊರತುಪಡಿಸಿ ಬ್ಯೂಟಿಷಿಯನ್ ಅಥವಾ ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಲ್ಲಿ ಪರಿಹಾರವನ್ನು ಪಡೆಯಲು ಅರ್ಹರಾಗಿರುವುದಿಲ್ಲ.

* ಉದ್ಯೋಗ ದೃಢೀಕರಣ ಪತ್ರ ನೀಡುವ ಅಧಿಕಾರಿಗಳು:

* ಬಿ.ಬಿ.ಎಂ.ಪಿ ವ್ಯಾಪ್ತಿ:- ವಾರ್ಡ್‌ಗಳ ಕಂದಾಯ ಅಧಿಕಾರಿ/ ಕಂದಾಯ ನಿರೀಕ್ಷಕರು / ಹಿರಿಯ ಆರೋಗ್ಯ ಅಧಿಕಾರಿಗಳು / ಆರೋಗ್ಯ ನಿರೀಕ್ಷಕರು > ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರು.

* ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರರ/ ಉಪ ತಹಶೀಲ್ದಾರ್/ಕಂದಾಯ ನಿರೀಕ್ಷಕರು/ ಕಂದಾಯ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು / ಕಾರ್ಮಿಕ ಅಧಿಕಾರಿಗಳು / ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು/ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ

ಆಗತ್ಯವಿರುವ ದಾಖಲೆಗಳು:

* ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಬೇಕಾಗಿರುವುದು ಕಡ್ಡಾಯ) ಬಿಪಿಎಲ್ ಕಾರ್ಡ್ ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ಘೋಷಣೆ.

* ಜನ್ಮ ದಿನಾಂಕ ದಾಖಲೆ ಪಾಸ್‌ಪೋರ್ಟ್

* ಪಾಸ್ ಪೊರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ

* 4 ಫಲಾನುಭವಿಗಳು ಸೇವಾ ಸಿಂಧು ಪೋರ್ಟ ಲ್ https://sevasindhu.karnataka.gov.in ಮೂಲಕ ಆನ್‌ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದು,

* ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು,

* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30-06-2020.

ವಿವರಗಳಿಗಾಗಿ ಸಂಪರ್ಕಿಸಿ:

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಛೇರಿ, ಕಲ್ಯಾಣ ಸುರಕ್ಷಾ ಭವನ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ ಬೆಂಗಳೂರು-560 029.

ಕಾರ್ಮಿಕ ಇಲಾಖೆ ಕಚೇರಿಗಳು.

ಬಿಬಿಎಂಪಿ ಕಚೇರಿಗಳು/ವಾರ್ಡ್ ಕಚೇರಿಗಳು, ಜಿಲ್ಲಾಧಿಕಾರಿಗಳು /ತಹಶೀಲ್ದಾರ್ ಕಚೇರಿಗಳು.

ಪುರಸಭೆ/ನಗರಸಭೆ/ಪಟ್ಟಣ ಪಂಚಾಯಿತಿ ಕಚೇರಿಗಳು

ಗ್ರಾಮ ಪಂಚಾಯತಿ ಕಚೇರಿಗಳು.