Call Us Now: 08272 221717

ಪಡುಮಾರ್ನಾಡು: ರೂ. 24 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

October 15, 2020

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರಗೋಳಿ ಸೌಹಾರ್ದ ನಗರದಲ್ಲಿ 13ಲಕ್ಷ ಮತ್ತು ತಂಡ್ರಕೆರೆಯಲ್ಲಿ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆ ಹಾಗೂ ಜಿ.ಪಂ.ಸದಸ್ಯರ ಅನುದಾನ 1ಲಕ್ಷ ವೆಚ್ಚದಲ್ಲಿ ಮೂಡುಮಾರ್ನಾಡಿನ ತಂಡ್ರಕೆರೆಯ ಅಮನೊಟ್ಟು ವೃತ್ತದಲ್ಲಿ ನಿರ್ಮಿಸಿರುವ ಹೈಮಾಸ್ಕ್ ದೀಪವನ್ನು ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಮಸ್ಯೆಗಳನ್ನು ಅರಿತು ಪಕ್ಷ ಬೇಧ ಮರೆತು ಆಯಾಯ ಪ್ರದೇಶದ ಅಬಿವೃದ್ದಿಯನ್ನು ಮಾಡಲಾಗುವುದು. ಹೆಚ್ಚು ಬಾಳಿಕೆ ಮತ್ತು ಗುಣಮಟ್ಟದ ದೃಷ್ಠಿಯಿಂದ ಕಾಂಕ್ರೀಟ್ ರಸ್ತೆಗಳನ್ನೇ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನವನ್ನು ವಿನಯೋಗಿಸುತ್ತೇವೆ.ಅಲ್ಪ ಸಂಖ್ಯಾತ ವಿಭಾಗದ ಸಹಕಾರದಿಂದಲೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಪಂ ಸದಸ್ಯೆ ಸುಜಾತ ಕೆ.ಪಿ, ಪಡುಮಾರ್ನಾಡು ಗ್ರಾಪಂ ಮಾಜಿ ಅಧ್ಯಕ್ಷರಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ದಿವ್ಯ ವರ್ಮ, ಸದಸ್ಯರಾದ ಶರತ್ ಶೆಟ್ಟಿ, ಶಕ್ತಿ ಕೇಂದ್ರದ ಸಹಸಂಚಾಲಕ ಭವಿಷ್ಯತ್ ಕೋಟ್ಯಾನ್, ಬೂತ್ ಸಮಿತಿ ಅಧ್ಯಕ್ಷ ರಘು ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.