Call Us Now: 08272 221717

ಮೂಡುಮಾರ್ನಾಡು ತಂಡ್ರಕೆರೆಯಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ

October 15, 2020

ಮೂಡುಬಿದಿರೆ: ದಿನಗೂಲಿಯಾಗಿ ದುಡಿದು ಆಸ್ಪತ್ರೆಯಲ್ಲಿ ಕಾಯುತ್ತಾ ಕುಳಿತು ಸಮಯವನ್ನು ವ್ಯರ್ಥ ಮಾಡುವುದಲ್ಲ ಬೇಕಾಬಿಟ್ಟಿಯಾಗಿ ಬಡವರಿಂದ ದೋಚುವ ಆಸ್ಪತ್ರೆಗಳಿಂದಾಗಿ ಬಡವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ದೃಷ್ಠಿಯಲ್ಲಿ ಭಾರತ ಸರಕಾರದ ಆಯುಷ್ಮಾನ್ ಕಾರ್ಡ್ ಬಡವರಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಶ್ರೀ ವಿಘ್ನೇಶ್ವರ ಫ್ರೆಂಡ್ಸ್ ಮೂಡುಮಾರ್ನಾಡು ಇದ ವತಿಯಿಂದ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಇದರ ಸಹಯೋಗದೊಂದಿಗೆ ತಂಡ್ರಕೆರೆ ಶಾಲೆಯಲ್ಲಿ ಮಂಗಳವಾರ ನಡೆದ ಆಯುಷ್ಮಾನ್ ಕಾರ್ಡ್ ನೋದಣಿ ಹಾಗೂ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಶಾಲೆಗೆ ಬೇಕಾದ ಸುಸಜ್ಜಿತ ಮೈದಾನ ನಿರ್ಮಾಣಕ್ಕೆ ತನ್ನ ನಿಧಿಯಿಂದ 5ಲಕ್ಷ ರೂ ಅನುದಾನವನ್ನು ನೀಡಲಾಗುವುದು. ಹಾಗೂ ಈ ಭಾಗದಲ್ಲಿ ರಸ್ತೆ, ಕುಡಿಯುವ ನೀರು ಮತ್ತು ದಾರಿದೀಪಗಳ ಅಭಿವೃದ್ಧಿ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದು ಹೇಳಿದರು.
ಜಿಪಂ ಸದಸ್ಯೆ ಸುಜಾತ ಕೆ.ಪಿ, ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಪಡುಮಾರ್ನಾಡು ಗ್ರಾ.ಪಂನ ಮಾಜಿ ಅಧ್ಯಕ್ಷರುಗಳಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಶ್ರೀ ವಿಘ್ನೇಶ್ವರ ಫ್ರೆಂಡ್ಸ್ ಮೂಡುಮಾರ್ನಾಡು ಅಧ್ಯಕ್ಷ ಗಣೇಶ್ ಕುಕ್ಕುದಪಲ್ಕೆ, ಗೌರವಾಧ್ಯಕ್ಷ ರಾಘು ಸಿ. ಗುಮ್ಮಡಬೆಟ್ಟು, ಸ್ಥಾನೀಯ ಸಮಿತಿ ಅಧ್ಯಕ್ಷ ಗಣೇಶ್ ಪೆರ್ಮುಡೆ, ಶಿಕ್ಷಕ ಬೋಜ, ಜನಾರ್ದನ್,ಈ ಸಂದರ್ಭದಲ್ಲಿದ್ದರು.
ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು