Call Us Now: 08272 221717

ಮೂಡುಬಿದಿರೆಯಲ್ಲಿ ಮಾಧ್ಯಮ

July 4, 2020

ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಕೊರೋನಾ ಕಾರಣದಿಂದಾಗಿ ಆರ್ಥಿಕ ವಿಕೇಂದ್ರೀಕರಣವಾಗುತ್ತಿದೆ. ಡಿಜಿಟಲ್ ಪತ್ರಿಕೋದ್ಯಮ ಬೆಳೆಯುತ್ತಿರುವ ಈ ದಿನಗಳಲ್ಲಿ ತಂತ್ರಜ್ಞಾನ ಆಧರಿತ ಅವಕಾಶಗಳನ್ನು ಬಳಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಪತ್ರಕರ್ತರು ಲೋಕಲ್ ಗ್ಲೋಬಲ್ ಪರಿಕಲ್ಪನೆಯ ಸಾಕಾರಕ್ಕೆ ಮುಂದಾಗಬೇಕು. ಸೇವಾ ಭದ್ರತೆಯಿಲ್ಲದೇ ಸಾಮಾಜಿಕ ಕಾಳಜಿಯಿಂದ ದುಡಿಯುವ ಪತ್ರಕರ್ತರಿಗೆ ಬೆನ್ನೆಲುಬಾಗಿ ನಿಂತು ಇದಕ್ಕೆ ಸಮಾಜವೂ ಸಹಕರಿಸಬೇಕು ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಹೇಳಿದರು.

ಅವರು ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಬುಧವಾರ ಸಮಾಜ ಮಂದಿರದಲ್ಲಿ ನಡೆದ ಮಾಧ್ಯಮ ಹಬ್ಬದ ಅಂಗವಾಗಿ ಪತ್ರಕರ್ತರ ಸವಾಲು ಸಾಧ್ಯತೆ ಕುರಿತು ದತ್ತಿ ಉಪನ್ಯಾಸ ನೀಡಿದರು. ಬದಲಾದ ಪರಿಸ್ಥಿತಿಯಲ್ಲಿ ಅರ್ಥ ವ್ಯವಸ್ಥೆಗೆ ಕೃಷಿ ಹಿಂದಿಗಿಂತ ಮೂರು ಪಟ್ಟು ಹೆಚ್ಚಿನ ಆದಾಯ ನೀಡಿದೆ. ಈ ಹಂತದಲ್ಲಿ ನಾವು ನಮಗಾಗಿ ಎನ್ನುವ ಮೂಲಕ ಸ್ಥಳೀಯ ನೆಲೆಗಟ್ಟಿನ ವಿಚಾರಗಳತ್ತ ಗಮನ ಹರಿಸಿ ಬೆಳೆಯಬೇಕು ಎಂದವರು ಹೇಳಿದರು.
ಹಿರಿಯ ಪತ್ರಕರ್ತ, ಸಾಹಿತಿ ಸದಾನಂದ ನಾರಾವಿ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು. ಎಂದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಮಾಜವನ್ನು ತಿದ್ದು ವ ಮಹತ್ವದ ಜವಾಬ್ದಾರಿ ಇರುವ ಮಾಧ್ಯಮಗಳು, ಪತ್ರಕರ್ತರು, ಸವಾಲಿನ, ಎದೆಗಾರಿಕೆಯ ಕೆಲಸ ನಿರ್ವಹಿಸುತ್ತಿವೆ ಎಂದರು.

ಕೊರೋನಾ ಸಂಕಟದ ಸಮಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡ ಆಶಾ ಕಾರ್ಯಕರ್ತಯರು, ಅರೋಗ್ಯ ಸಿಬ್ಬಂದಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪುರಸಭೆ, ಜವನೆರ್ ಬೆದ್ರ ಸಂಘಟನೆ, ನೇತಾಜಿ ಬ್ರಿಗೇಡ್, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ, ಆರದಿರಲಿ ಬದುಕು ಆರಾಧನ ಸೇವಾ ತಂಡ, ಅರುಣ್ ಪ್ರಕಾಶ್ ಶೆಟ್ಟಿ, ಯುವ ಮಿಲನ್, ತ್ರಿಭುವನ್ ಅಟೋ ಮೋಟಿವ್ ಸ್ಪೋಟ್ಸ್ ಕ್ಲಬ್ & ಬೆದ್ರ ಅಡ್ವೆಂಚರರ್ಸ್ ಕ್ಲಬ್, ಸಮಾಜಮಂದಿರ ಸಭಾ, ಸೌಹಾರ್ದ ಫೋರಂ ಮೂಡುಬಿದಿರೆ, ಬ್ಲಡ್ ಡೋನರ್ಸ್ ಹೆಲ್ಪ್ ಲೈನ್ ಮೂಡುಬಿದಿರೆ ಅವರನ್ನು ಗೌರವಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ವೇಣು ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಅನಿತಾ ಲಕ್ಷ್ಮೀ ಮುಖ್ಯ ಅತಿಥಿಯಾಗಿದ್ದರು.

ಪ್ರಸನ್ನ ಹೆಗ್ಡೆ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ ಸಮ್ಮಾನ ಪತ್ರ ವಾಚಿಸಿದರು. ಗಣೇಶ ಕಾಮತ್ ಕೋರೋನಾ ವಾರಿಯರ್ಸ್ ವಿವರ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಪರಸ್ಕರಿಸಲಾಯಿತು. ಉಪಾಧ್ಯಕ್ಷ ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಯಶೋಧರ ವಿ.ಬಂಗೇರ ವಂದಿಸಿದರು.