Call Us Now: 08272 221717

ಮೂಡುಬಿದಿರೆಯಲ್ಲಿ ಬಾಟ ಸ್ಟೋರ್ ಉದ್ಘಾಟನೆ

September 4, 2020

ಮೂಡುಬಿದಿರೆ: ವಿಶ್ವದ ಪ್ರತಿಷ್ಠಿತ ಪಾದರಕ್ಷೆ ಬ್ರಾಂಡ್ `ಬಾಟ’ ಇದರ ಮೂಡುಬಿದಿರೆಯ ಎಕ್ಸ್ಕ್ಲೂಸಿವ್ ಸ್ಟೋರ್ ಅನ್ನು ಮೂಡುಬಿದಿರೆ ಬಸ್‍ನಿಲ್ದಾಣ ಬಳಿಯ ಪ್ರಭು ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.ೂಡುಬಿದಿರೆ ವಲಯದ ಪ್ರಧಾನ ಕ್ರೈಸ್ತ ಧರ್ಮಗುರು ರೆ.ಫಾ ಫೌಲ್ ಸಿಕ್ವೇರ ಆಶೀವರ್ಚನ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಬಾಟ ಸ್ಟೋರ್ ಅನ್ನು ಉದ್ಘಾಟಿಸಿದರು. ಐ ಕೇರ್ ಡೆವೆಲಪರ್ಸ್ ಮೂಲಕ ಅಶ್ವಿನ್ ಪಿರೇರ ಅವರು ಬಹಳಷ್ಟು ಶ್ರಮದಿಂದ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮೂಡುಬಿದಿರೆಯ ಅಭಿವೃದ್ಧಿಗೆ ಅಶ್ವಿನ್ ಅವರ ಉದ್ಯಮದಲ್ಲಿ ಶ್ರಮವೂ ಸೇರಿದೆ. ಬಾಟ ಸ್ಟೋರ್ ಅನ್ನು ಮೂಡುಬಿದಿರೆಗೆ ಪರಿಚಯಿಸುವ ಮೂಲಕ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಲ್ಲಿಯೂ ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಅಶ್ವಿನ್ ಪಿರೇರ ಅವರ ತಾಯಿ ತೆರೇಸಾ ಪಿರೇರ ಹಾಗೂ ಮೆಲಿಸ್ಸಾ ಡಿಸೋಜ ಅವರ ತಾಯಿ ವಿಲ್ಮಾ ಪಿರೇರಾ ದೀಪ ಬೆಳಗಿದರು.
ಬಾಟ ಸೌತ್ ರೀಜನ್ ಫ್ರಾಂಚೈಸಿ ಅಪರೇಷನ್‍ನ ಜಿ.ಎಂ ಮಹಮ್ಮದ್ ಸಿಗ್ಬುದ್ದೀನ್, ಬಾಟ ಎಸಿಎಂ ಇರ್ಫಾನ್ ಖಾನ್ ಶುಭ ಹಾರೈಸಿದರು.
ಧರ್ಮಗುರುಗಳಾದ ಬ್ರಾದರ್ ವಿಕ್ಟರ್ ಕ್ರಾಸ್ತ, ಫಾ.ರೋನಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಪ್ರಸಾದ್ ಕುಮಾರ್, ಮೂಡಾ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಪಂಚಶಕ್ತಿ ಸಂಸ್ಥೆಯ ಮಾಲೀಕ ರಂಜಿತ್ ಪೂಜಾರಿ, ಉದ್ಯಮಿ ಅಬ್ದುಲ್ ರಝಾಕ್ ಪೆರಿಂಜೆ, ಧರಣೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಜೈಸನ್ ತಾಕೋಡೆ ಕಾರ್ಯಕ್ರಮ ನಿರೂಪಿಸಿದರು.

ವಿಶ್ವದ ಪ್ರಮುಖ ಬ್ರಾಂಡ್ `ಬಾಟ’
125ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ವಿಶ್ವದ ಪ್ರಮುಖ ಬ್ರಾಂಡೆಡ್ ಪಾದರಕ್ಷೆಗಳ ಕಂಪೆನಿ ಇಂದು 30 ದೇಶಗಳ ವಿಶ್ವಾಸಾರ್ಹ ಬ್ರಾಂಡೆಡ್ ಸಂಸ್ಥೆಯಾಗಿದೆ. 60 ಮಿಲಿಯನ್ ಅಧಿಕ ಪಾದರಕ್ಷೆಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆಯೂ ಕಂಪೆನಿಯದ್ದು. ಐತಿಹಾಸಿಕ, ಶೈಕ್ಷಣಿಕ ಹಬ್ ಆಗಿರುವ ಮೂಡುಬಿದಿರೆಯಲ್ಲಿ ಚೊಚ್ಚಲ ಬಾಟ ಸ್ಟೋರ್ ಇದಾಗಿದ್ದು, ಐಕೇರ್ ಡೆವೆಲಪರ್ಸ್ ಮಾಲಕ ಅಶ್ವಿನ್ ಪಿರೇರಾ ಹಾಗೂ ಅವರ ಪತ್ನಿ ಮೆಲಿಸ್ಸಾ ಡಿಸೋಜ ಅವರ ಮಾಲಕತ್ವದಲ್ಲಿ ಜನರಿಗೆ ಸೇವೆ ನೀಡಲಿದೆ.Photos by: Ranjan Studio, Moodubidire