Call Us Now: 08272 221717

ಪೆರಿಂಜೆಯಲ್ಲಿ ರಕ್ತದಾನ ಶಿಬಿರ

June 23, 2020

ಮೂಡುಬಿದಿರೆ: ಶ್ರೀ ಮಾತ್ರಭೂಮಿ ಗ್ರಾಮ ವಿಕಾಸ ಟ್ರಸ್ಟ್ ರಿ. ಹೊಸಂಗಡಿ – ಬಡಕೋಡಿ, ಜೇಸಿಐ ಮೂಡುಬಿದಿರೆ ತ್ರಿಭುವನ್, ಹಾಲು ಉತ್ಪಾದಕರ ಸಂಘ ನಿ. ಪೆರಿಂಜೆ, ಮತ್ತು ವೆನ್ ಲಾಕ್ ರಕ್ತ ನಿಧಿ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಮಂಗಳವಾರ ಪೆರಿಂಜೆ ಹಾಲು ಉತ್ಪಾದಕರ ಸಂಘದಲ್ಲಿ ಜರಗಿತು.
ವೆನ್ಲಾಕ್ ಆಸ್ಪತ್ರೆ ಯ ಡಾಕ್ಟರ್ ಆಕಾಶ್ ಶಿಬಿರವನ್ನು ಉದ್ಘಾಟಿಸಿದರು.
ಶ್ರೀ ಮಾತ್ರಭೂಮಿ ಗ್ರಾಮ ವಿಕಾಸ ಟ್ರಸ್ಟ್ನ ಅಧ್ಯಕ್ಷ ಕಿರಣ್ ಕುಮಾರ್, ಕೋಶಾಧಿಕಾರಿ ಕೇಶವ ಆಚಾರ್ಯ, ಜೇಸಿಐ ಮೂಡುಬಿದಿರೆ ತ್ರಿಭುವನ್ ನ ಅಧ್ಯಕ್ಷ ಸಂತೋಷ್ ಕುಮಾರ್, ಪೆರಿಂಜೆ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸುಧಾಕರ್ ನೂಯಿ, ಜೇಸಿ ಕಾರ್ಯದರ್ಶಿ ದಯಾನಂದ ಹೆಗ್ಡೆ,
ಹಾಗೂ ಜೇಸಿರೇಟ್ ಅಧ್ಯಕ್ಷರು ವೀಣಾ ಸಂತೋಷ್, ಜೇಜೆಸಿ ಅಧ್ಯಕ್ಷ ಜಯಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
40 ಮಂದಿ ರಕ್ತ ದನ ಮಾಡಿದರು.