Call Us Now: 08272 221717

ಬೆಳುವಾಯಿ: ಸಹಕಾರಿ ವ್ಯವಸಾಯಿಕ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ

June 16, 2020

ಮೂಡುಬಿದಿರೆ: ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಂಘದ ಕಾರ್ಯವ್ಯಾಪ್ತಿಯ 5 ಗ್ರಾಮಗಳ 20 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ ಎರಡು ಸಾವಿರ ರೂಪಾಯಿ ಪುರಸ್ಕಾರ ಸಹಿತ ಮಾಸ್ಕ್ ಮತ್ತು ಸಾನಿಟೈಸರ್ ಕೊಡುಗೆಯನ್ನು ವಿತರಿಸುವ ಸಮಾರಂಭ ಕೆಸರ್‌ಗದ್ದೆ ಸಭಾಭವನದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್‌ರವರು ಕೊರೊನಾ ಸೋಂಕು ಹರಡದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು. ಸಂಘವು ತನ್ನ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ದಿಗೆ ಹಾಗೂ ಸದಸ್ಯರ ಆರೋಗ್ಯದ ಕಡೆ ಕೂಡ ಸಹಾಯ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ದಿನವಿಡೀ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

ಲಾಕ್ ಡೌನ್ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಯ ಬಿ.ಪಿ.ಎಲ್. ಕಾರ್ಡು ಹೊಂದಿಲ್ಲದ ಕಡುಬಡವರಿಗೆ ನಮ್ಮ ಸಂಘದಿAದ ಉಚಿತವಾಗಿ ಆಹಾರ ಕಿಟ್ಟನ್ನು ಒದಗಿಸಲಾಗಿದೆ ಎಂದವರು ಹೇಳಿದರು.
ಸಂಘದ ಉಪಾಧ್ಯಕ್ಷ ಬಿ.ಜಯರಾಜ್, ನಿರ್ದೇಶಕರಾದ ಉಷಾ ಡಿ.ಪೈ, ದಾಮೋದರ ಬಂಗೇರ, ಅಂಬಿಕಾ ಶೆಟ್ಟಿ, ಶಂಕರ ಶೆಟ್ಟಿ, ಜೋನ್ ಎಫ್.ನಜ್ರತ್, ಸುಧಾಕರ ಶೆಟ್ಟಿ, ಶ್ರೀನಾಥ್ ಸುವರ್ಣ, ಅಭಿನಂದನ್ ಎನ್.ಬಲ್ಲಾಳ್, ಪ್ರಭಾಕರ ಜಿ,ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನ ಪ್ರತಿನಿಧಿ ಸಂಜಯ್ ಅತಿಕಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.