Call Us Now: 08272 221717

ಬಿರುವೆರ್ ಕುಡ್ಲ ಬೆದ್ರ ಘಟಕದಿಂದ ಅಶಕ್ತಗೋಸ್ಕರ ಕೃಷಿ

July 7, 2020

ಮೂಡುಬಿದಿರೆ: ಬಿರುವೆರ್ ಕುಡ್ಲ ಬೆದ್ರ ಘಟಕದಿಂದ ಹಡಿಲು ಗದ್ದೆಯಲ್ಲಿ ಕೃಷಿ ಮಾಡುವ ಮೂಲಕ ಬಂದ ಕೃಷಿ ಆದಾಯವನ್ನು ಅಶಕ್ತ ಕುಟುಂಬಗಳಿಗೆ ನೀಡುವ ಸಲುವಾಗಿ ಜುಲೈ 5 ರಂದು ಮರೋಡಿ ಎಂಬಲ್ಲಿ ನಾಟಿ ಕಾರ್ಯ ನಡೆಸಲಾಯಿತು.
ಮರೋಡಿಯ ಹೊಸಮನೆ ಚಂದಪ್ಪ ಪೂಜಾರಿಯವರಿಗೆ ಸೇರಿದ ಸುಮಾರು 3 ಎಕ್ರೆ ಜಾಗದಲ್ಲಿ ಹಡಿಲು ಬಿದ್ದ ಗದ್ದೆಯನ್ನು ಬಿರುವೆರ್ ಕುಡ್ಲ ಬೆದ್ರ ಘಟಕದ ಸದಸ್ಯರು ಶ್ರಮದಾನದ ಮೂಲಕ ಕೃಷಿಗೆ ಸಿದ್ಧಪಡಿಸಿದ್ದಾರೆ.
ರವಿವಾರ ಸಂಘದ ಅಧ್ಯಕ್ಷ ರಾಜ್ ಪವಿ ಬಿಲ್ಲವ ನೇತೃತ್ವದಲ್ಲಿ ಬಿತ್ತನೆ ನಡೆಸಲಾಗಿದೆ. ಸಾಗುವಳಿಯಲ್ಲಿ ಬಂದ ಅಕ್ಕಿಯನ್ನು ಬಡ ಕುಟುಂಬಗಳಿಗೆ ಹಂಚಲಾಗುವುದು ಮತ್ತು ಬೈ ಹುಲ್ಲನ್ನು ಗೋ ಶಾಲೆಗಳಿಗೆ ದಾನ ನೀಡಲಾಗುವುದು ಎಂದು ಬಿರುವೆರ್ ಕುಡ್ಲ ಬೆದ್ರ ಘಟಕದ ಅಧ್ಯಕ್ಷ ರಾಜ್ ಪವಿ ಬಿಲ್ಲವ ತಿಳಿಸಿದ್ದಾರೆ.