Call Us Now: 08272 221717

ಮೂಡುಬಿದಿರೆ: ಮಾನಸಿಕ ಅಸ್ವಸ್ಥೆಯಿಂದ ಕೊರೊನ ಜಾಗೃತಿ

July 8, 2020

ಮೂಡುಬಿದಿರೆ ಕೊರೋನಾ ನಿಯಂತ್ರಿಸುವ ‌ಸಲುವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಎಷ್ಟೇ ಎಚ್ಚರಿಕೆ ‌ನೀಡಿದರೂ ಮಾಸ್ಕ್ ಹಾಕದ ಮಂದಿಗೆ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಹಿಳೆಯೋರ್ವರು‌ ಮಾದರಿಯಾಗಿದ್ದಾರೆ.

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಕಾಣ ಸಿಕ್ಕ‌ ಈ ಮಹಿಳೆಗೆ ಮಾನಸಿಕ ಸಮಸ್ಯೆ ಇದ್ದರೂ ತಾನು ದರಿಸಿದ ಬಟ್ಟೆಯನ್ನೇ ಮುಖಕ್ಕೆ‌ ಮುಚ್ಚಿಕೊಂಡು ಮಾದರಿಯಾಗಿದ್ದಾರೆ.

ಲೋಕ ಪರಿಜ್ಞಾನ ಇರದೆ ಹಾಡು ಹೇಳುತ್ತಾ, ಕಿರುಚಾಡುತ್ತಾ ಇದ್ದ ಈ ಮಹಿಳೆ ಕೊರೋನಾ ವಿಚಾರದಲ್ಲಿ ಸ್ವಯಂ ಪ್ರೇರಿತ ಎಚ್ಚರಿಕೆ ವಹಿಸಿದ್ದು ವಿಶೇಷ. ಎಲ್ಲವೂ ಸರಿ‌ ಇದ್ದು ಕೊರೋನಾ ಮುಂಜಾಗ್ರತಾ ಕ್ರಮ ಅನುಸರಿಸದ ಬೀದಿ ಸಂಚಾರಿಗಳು ಈ ಮಹಿಳೆಯನ್ನು ನೋಡಿ‌ ಬುದ್ದಿ ಕಲಿಯುವುದು ಸಾಕಷ್ಟಿದೆ.