Call Us Now: 08272 221717

ಮೂಡುಬಿದಿರೆಯ ಇಬ್ಬರಿಗೆ ಕೊರೊನಾ ಸೋಂಕು

July 13, 2020

ಮೂಡುಬಿದಿರೆ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೂಡುಬಿದಿರೆಯ ಇಬ್ಬರಿಗೆ ಕೊರನಾ ಸೋಂಕು‌ ದೃಢ ಪಟ್ಟಿದೆ.

ಮಂಗಳೂರಿನಲ್ಲಿ ಅಂಬುಲೆನ್ಸ್ ಚಾಲಕರಾಗಿರುವ ಮೂಡುಬಿದಿರೆ ಪುತ್ತಿಗೆಯ ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನಲ್ಲಿ ವಾಸವಾಗಿರುವ ದರೆಗುಡ್ಡೆಯ ನಿವಾಸಿಯೊಬ್ಬರಿಗು ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಅವರನ್ನು ಕೂಡ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.