Call Us Now: 08272 221717

ಕಾರ್ಕಳದಲ್ಲಿ ಕ್ರಿಯೇಟಿವ್ ಪಿಯು ಕಾಲೇಜು ದಾಖಲಾತಿ ಆರಂಭ: ಪರಿಣಿತ ಉಪನ್ಯಾಸಕರಿಂದ ಸಂಸ್ಥೆ ನಿರ್ಮಾಣ

August 18, 2020


ಕಾರ್ಕಳ: ಮೂಡುಬಿದಿರೆಯ ಅನುಭವಿ ಹಾಗೂ ವಿವಿಧ ವಿಷಯಗಳಲ್ಲಿ ಪರಿಣಿತ ಉಪನ್ಯಾಸಕರನ್ನು ಒಳಗೊಂಡ ಕ್ರಿಯೇಟಿವ್ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಕಾಲೇಜು ದಾಖಲಾತಿಯು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ನೆಚ್ಚಿನ ಶೈಕ್ಷಣಿಕ ತಾಣವಾಗಿ ಗುರುತಿಸಿಕೊಳ್ಳುತ್ತಿದೆ.


ಕಾರ್ಕಳದ, ಹಿರ್ಗಾನದ ಸ್ವಚ್ಛಂದ ಪರಿಸರದಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಪ್ರಸಕ್ತ ವರ್ಷದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ, ಗುಣಮಟ್ಟದ ಶಿಕ್ಷಣ ನೀಡಲು ಸಜ್ಜಾಗಿದೆ.



ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವಿಷಯ ಪರಿಣಿತ ಉಪನ್ಯಾಸಕ ವೃಂದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಪರಿಣಿತರ ವಿಶೇಷ ತಂಡವು ಈ ಕಾಲೇಜಿನ ವಿಶೇಷತೆಗಳಲ್ಲೊಂದು. ಮೂಡುಬಿದಿರೆ ಪ್ರತಿಷ್ಠಿತ ಕಾಲೇಜುಗಳಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗಣಪತಿ ಭಟ್ ಈ ಕಾಲೇಜಿನ ಪ್ರಾಂಶುಪಾಲರಾಗಿದ್ದು, ವಿಜ್ಞಾನ ವಿಭಾಗದಲ್ಲಿ ವಿಮಲ್ ರಾಜ್( ಇಂಗ್ಲೀಷ್), ಗಣನಾಥ ಶೆಟ್ಟಿ, ಶುಭಾ ಅಶ್ವಥ್, ನಿಧಿ ಆರ್. ಶೆಟ್ಟಿ, ಲಕ್ಷಣ (ಫಿಸಿಕ್ಸ್), ಆದರ್ಶ ಎಂ.ಕೆ, ವಿಶ್ವನಾಥ, ದೀಪಿಕಾ ಪ್ರಭು, (ಕೆಮಿಷ್ಟ್ರಿ), ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಅಶ್ವತ್ಥ ಎಸ್.ಎಲ್, ಗಣಪತಿ ಕೆ.ಎಸ್, ಅದಿತ್ಯ ವಟಿ ಕೆ. ಗಣಿತ ವಿಷಯದಲ್ಲಿ ಸಂಸ್ಥೆಯಲ್ಲಿ ವಿದ್ಯಾಥಿಗಳಿಗೆ ಬೋಧನೆ ಮಾಡಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಾಘವೇಂದ್ರ ಬಿ.ರಾವ್, ರತನ್, ಅಶ್ವಿನಿ, ವಿಘ್ನೇಶ್( ವಾಣಿಜ್ಯ ವಿಷಯ), ಸುಚಿತ್ರಾ, ಸಮತಾ ಕೆ.ಜೆ( ಕಂಪ್ಯೂಟರ್ ಸೈನ್ಸ್), ಮಹೇಶ್ ಕೆ.ಎನ್( ಅರ್ಥಶಾಸ್ತ್ರ), ಸಿಎ ಪ್ರಭಾವ ಪಿ.ಹೆಗ್ಡೆ( ಸಿಎ ತರಬೇತಿ) ಬೋಧನೆ ಮಾಡಲಿದ್ದಾರೆ. ವಿನಾಯಕ್ ಜೋಗ್, ಅರುಣ್ ಜಾದವ್(ಹಿಂದಿ), ರಾಜೇಶ್ ಶೆಟ್ಟಿ, ಶಿಮ್ಮಿ ರಾಜ್(ಇಂಗ್ಲೀಷ್) ರಮೇಶ ಎಂ., ಸತೀಶ್ ಎ. ರಾಮಕೃಷ್ಣ ಹೆಗ್ಡೆ ಕನ್ನಡ ವಿಷಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಲಿದ್ದಾರೆ.
ವಿಧ್ಯಾರ್ಥಿಗಳು ಪಿಯುಸಿಯಲ್ಲಿ ಎದುರಿಸಬಹುದಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (NEET, JEE, CET, NDA, NATA, KVPY, CA-Foundation, CS, ACCA, NIFT) ತರಬೇತಿಯನ್ನುರಬೇತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಒಂದೇ ಸೂರಿನಡಿ ನೀಡಲಿದೆ. ಹಲವಾರು ಸಾಧಕರನ್ನು ಸಮಾಜಕ್ಕೆ ನೀಡಿದ ಕೀರ್ತಿ ಈ ತಂಡದ ಉಪನ್ಯಾಸಕರಿಗಿದೆ.

ಕ್ರಿಯೇಟಿವ್ ಎಜ್ಯುಕೇಶನ್ ಫೌಂಡೇಶನ್:
ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೂಡುಬಿದಿರೆಯಲ್ಲಿ ಕ್ರಿಯೇಟಿವ್ ಎಜ್ಯುಕೇಶನ್ ಫೌಂಡೇಶನ್ ಸ್ಥಾಪನೆಯಗಿದ್ದು, ಈಗಾಗಲೇ ಹಾಸನದ ಪ್ರತಿಷ್ಠಿತ ಎಚ್‍ಕೆಎಸ್ ಪಿಯು ಕಾಲೇಜನ್ನು ಮುನ್ನಡೆಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಎರಡೂ ಜಿಲ್ಲೆಯ ಕೇಂದ್ರ ಸ್ಥಳಗಳಿಗೆ ಸಮೀಪವಿರುವ ಕಾರ್ಕಳದಲ್ಲಿ ಕ್ರಿಯೇಟಿವ್ ಪಿಯು ಕಾಲೇಜು ಅನ್ನು ನಿರ್ಮಿಸಿದೆ. ಪರಿಣಿತ ಉಪನ್ಯಾಸಕರಾದ ಗಣಪತಿ ಭಟ್, ಗಣನಾಥ ಶೆಟ್ಟಿ, ಅಮೃತ್‍ರೈ, ಆದರ್ಶ್ ಎಂ.ಕೆ, ಅಶ್ವತ್ಥ ಎಸ್.ಎಲ್, ವಿಮಲ್ ರಾಜ್ ಜಿ., ಗಣಪತಿ ಕೆ.ಎಸ್ ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

ದಾಖಲಾತಿ ಪ್ರಾರಂಭ: ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭಗೊಂಡಿದ್ದು, ಪಾಲಕರು, ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಕ್ರಿಯೇಟಿವ್ ಕಾಲೇಜು ಅನ್ನು ಆಯ್ಕೆ ಮಾಡುತ್ತಿದ್ದಾರೆ. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಸುವರ್ಣಾವಕಾಶವಿದೆ.