Call Us Now: 08272 221717

ಗುರುಪುರ ಸೇತುವೆ ಲೋಕಾರ್ಪಾಣೆ

June 12, 2020

ಮಂಗಳೂರು ಕಾರ್ಕಳ -ಮೂಡುಬಿದಿರೆ- ಕುಲಶೇಖರ (ಮಂಗಳೂರು) ನಡುವಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿ ವುದು. ಮಂಗಳೂರು -ಬೆಂಗಳೂರು ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು‌

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.

ಗುತ್ತಿಗೆದಾರರಾದ ಮುಗೋಡಿ ಸುಧಾಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಸಕ ಡಾ. ವೈ ಭರತ್ ಶೆಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹಿಂ, ತಾ.ಪಂ.ಸದಸ್ಯ ಸಚಿನ್ ಅಡಪ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಭಟ್, ಇಂಜಿನಿಯರ್ ಗಳಾದ ಜಿ.ಎನ್‌.ಹೆಗಡೆ, ರಮೇಶ್, ಕೇಶವ ಮೂರ್ತಿ, ಕೀರ್ತಿ ಅಮೀನ್ ಉಪಸ್ಥಿತರಿದ್ದರು. ಜಗದೀಶ್ ಶೆಣವ ಕಾರ್ಯಕ್ರಮ ನಿರೂಪಿಸಿದರು.