Call Us Now: 08272 221717

ಮೂಡುಬಿದಿರೆ ಬಸದಿಗಳಲ್ಲಿ ಜಿನೇಶ್ಚರ ಪೂಜೆ, ನಾಗರ ಪಂಚಮಿ ಆಚರಣೆ

July 25, 2020

ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ16 ಬಸದಿಗಳಲ್ಲಿ ಜೈನಮಠದ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಜಿನೇಶ್ವರ ಅಭಿಷೇಕ ವಿಶೇಷ ಪೂಜೆ, ಪ್ರತಿ ಬಸದಿಯಲ್ಲಿ ಇರುವ ನಾಗಾಲಯಗಳಲ್ಲಿ ನಾಗರ ಪಂಚಮಿ ಅತ್ಯಂತ ಶ್ರದ್ದಾ ಭಕ್ತಿ ಯಿಂದ ಆಚರಿಸಲಾಯಿತು.

ತಮಿಳುನಾಡಿನ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಡಾ. ಸೆಲ್ವ ಕುಮಾರ್ ಕುಟುಂಬ ಸ್ಥರು ಶ್ರೀಗಳಿಂದ ಆಶೀರ್ವಾದ ಪಡೆದರು. ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್, ಪ್ರಭಾಚಂದ್ರ, ಅಮಿತ್ ತೇಜ ತೇಜ ಇಂಜಿನಿಯರ್, ಸಂಜಯಂತ ಕುಮಾರ್ ಶೆಟ್ಟಿ, ವೀರೇಂದ್ರ ಕುಮಾರ್ ಜಗತ್ಪಾಲ ಇಂದ್ರ ಮೊದಲಾದವರು ಉಪಸ್ಥಿತರಿದ್ದರು