Call Us Now: 08272 221717

ಜ್ಞಾನ ವಿಕಾಸ ಕೇಂದ್ರದಿಂದ ಪರಿಸರ ಜಾಗೃತಿ

June 6, 2020

ಮೂಡುಬಿದಿರೆ : ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವ ಸಂಕುಲಗಳು, ಕಾಡುಗಳು, ಜಲಚರಗಳು ಸೇರಿ ಪರಿಸರ ನಿರ್ಮಾಣವಾಗಿದೆ. ಆಹಾರ ಸರಪಣಿಯ ಮೂಲಕ ನಾವೆಲ್ಲರೂ ಬದುಕುತ್ತಿದ್ದೇವೆ. ಆದರೆ ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದು ಇದರಿಂದಾಗಿ ಮುಂದೆ ಮನುಕುಲದ ಅಸ್ತಿತ್ವಕ್ಕೆ ಕುತ್ತಾಗಲಿದೆ ಎಂದು ನಿವೃತ್ತ ಶಿಕ್ಷಕ ಪಾಲ್ತಾಡಿ ಭಾಸ್ಕರ ಆಚಾರ್ಯ ಎಚ್ಚರಿಸಿದ್ದಾರೆ. ಅವರು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಹಯೋಗದೊಂದಿಗೆ ಮೂಡುಬಿದಿರೆ ತಾಲೂಕಿನ ಚಾಮುಂಡಿಬೆಟ್ಟ ಪರಿಸರದಲ್ಲಿ ಶುಕ್ರವಾರ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗಿಡಗಳನ್ನು ನೆಟ್ಟು ಮಾತನಾಡಿದರು. ಪ್ರಾಣಿಗಳ ನಾಶದಿಂದಾಗಿ ಅವುಗಳು ಇಂದು ನಾಡಿಗೆ ಬಂದು ನಾವು ಬೆಳೆಸುವ ಕೃಷಿ ತೋಟವನ್ನು ಅವಲಂಬಿಸಬೇಕಾಗಿದೆ ಇದರಿಂದಾಗಿ ಮನುಷ್ಯನ ಆಹಾರ ಪದ್ಧತಿಗೆ ತೊಂದರೆಯಾಗಲಿದೆ ಆದ್ದರಿಂದ ಇನ್ನು ಮುಂದೆಯಾದರೂ ನಾವು ಎಚ್ಚೆತ್ತುಕೊಂಡು ಪರಿಸರವನ್ನು ಸಂರಕ್ಷಿಸುವತ್ತ ಗಮನ ನೀಡಬೇಕಾಗಿದೆ ಎಂದು ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದ ಅಧ್ಯಕ್ಷ ಸತೀಶ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪುರಸಭಾ ಸದಸ್ಯ ನವೀನ್ ಶೆಟ್ಟಿ, ವಲಯದ ಮೇಲ್ವೀಚಾರಕ ಗಿರೀಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ನಿಯೋಜಿತ ಅಧ್ಯಕ್ಷೆ ಬೇಬಿ, ಸೇವಾ ಪ್ರತಿನಿಧಿ ಮಮತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ತಸ್ರೀಫ್ ಸ್ವಾಗತಿಸಿದರು. ಜ್ಞಾನ ವಿಕಾಸ ಕೇಂದ್ರದ ತಾಲೂಕಿನ ಸಮನ್ವಯಾಧಿಕಾರಿ ಸರಿತಾ ಕಾರ್ಯಕ್ರಮ ನಿರೂಸಿದರು.