Call Us Now: 08272 221717

ಕಡಂದಲೆ: ಅಕ್ರಮ ಮರಳುಗಾರಿಕೆಗೆ ದಾಳಿ, ಸೊತ್ತು ವಶ

June 6, 2020


ಮೂಡುಬಿದಿರೆ : ಕಡಂದಲೆ ಶಾಂಭವಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯ ಅಡ್ಡೆಗೆ ಉಡುಪಿ ಜಿಲ್ಲಾ ಗಣಿ ಅ„ಕಾರಿಗಳು ದಾಳಿ ನಡೆಸಿದ್ದು ಈ ಪ್ರದೇಶ ಮೂಡುಬಿದಿರೆಗೆ ಸೇರಿರುವ ಕಾರಣ ಸೊತ್ತು ಮತ್ತು ಪ್ರಕರಣವನ್ನು ಮೂಡುಬಿದಿರೆ ತಹಶೀಲ್ದಾರರಿಗೆ ಹಸ್ತಾಂತರಿಸಲಾಗಿದೆ.
ಉಡುಪಿ ಮತ್ತು ದ.ಕ. ಜಿಲ್ಲಾ ಗಡಿ ಪ್ರದೇಶವಾದ ಕಡಂದಲೆಯ ಶಾಂಭವಿ ನದಿಯಲ್ಲಿ ಮರಳು ಡ್ರೆಜ್ಜಿಂಗ್ ಯಂತ್ರೋಪಕರಣಗಳನ್ನು ಅಕ್ರಮವಾಗಿ ನದಿಯಲ್ಲಿ ಸ್ಥಾಪಿಸಿ ಮರಳುಗಾರಿಕೆಯಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಜಿಲ್ಲೆಯ
ಅ„ಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂರು ನಾಲ್ಕು ಲೋಡ್‍ಗಳಷ್ಟು ಮರಳು , ತಾಣದಲ್ಲಿದ್ದ ಯಂತ್ರಗಳು ಹಾಗೂ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಳಿಕ ಪ್ರಕರಣವನ್ನು ಮೂಡುಬಿದಿರೆ ತಹಶೀಲ್ದಾರರ ಮೂಲಕ ಭೂ ಮತ್ತು ಗಣಿ ಇಲಾಖೆಗೆ ಒಪ್ಪಿಸಲಾಗಿದೆ.