Call Us Now: 08272 221717

ಮೂಡುಬಿದಿರೆ ಆಶಾ ಕಾರ್ಯಕರ್ತೆಯರಿಗೆ ಕೆಎಂಎಫ್ ಉತ್ಪನ್ನಗಳ ಕೊಡುಗೆ

June 12, 2020

ಮೂಡುಬಿದಿರೆ: `ಕೋವಿಡ್ ವಾರಿರ‍್ಸ್ ಬಳಗದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವಪೂರ್ಣವಾಗಿದೆ ‘ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಮೂಡುಬಿದಿರೆ ಸಮಾಜಮಂದಿರದಲ್ಲಿ ಮೂಡುಬಿದಿರೆ ತಾಲೂಕಿನ 69 ಮಂದಿ ಆಶಾ ಕಾರ್ಯಕರ್ತೆಯರಿಗೆ
ನಂದಿನಿ ಉತ್ಪನ್ನ (5 ಲೀ. ತೃಪ್ತಿ ಹಾಲು, ಅರ್ಧ ಕೆಜಿ ತುಪ್ಪ, ಬೈಟ್ಸ್ 10, ಮೈಸೂರು ಪಾಕ್ ಪ್ಯಾಕೆಟ್)ಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

ಹಾಲು ಒಕ್ಕೂಟದ ನಿರ್ದೇಶಕ, ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ` ಕೋವಿಡ್, ಮಳೆಗಾಲದ ಸಮಸ್ಯೆಗಳ ನಡುವೆಯೂ ಹೈನುಗಾರರಿಗೆ ಸರಿಯಾದ ಬೆಲೆ ನೀಡುವ ಜತೆಗೆ ಕೋವಿಡ್‌ನಂಥ ಸಮಸ್ಯೆಗಳಿಗೆ ಒಕ್ಕೂಟ ಸೂಕ್ತವಾಗಿ ಸ್ಪಂದಿಸುತ್ತಿದೆ . ಅವಿಭಜಿತ ದ.ಕ. ಜಿಲ್ಲೆಯ 2000 ಆಶಾ ಕಾರ್ಯಕರ್ತೆಯರಿಗೆ ಒಟ್ಟು ಒಕ್ಕೂಟವು ರೂ. 20 ಲಕ್ಷದಷ್ಟು ಕೊಡುಗೆ ನೀಡಿದೆ’ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ, ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್, ಹಾಲು ಒಕ್ಕೂಟದ ನಿರ್ದೇಶಕಿ ಸುಭದ್ರಾ ರಾವ್, ಉಪವ್ಯವಸ್ಥಾಪಕ ಪ್ರಭಾಕರ್, ವಿಸ್ತರಣಾಽಕಾರಿಗಳಾದ ಪ್ರತಿಭಾ, ಸರೋಜಿನಿ, ಮಾರುಕಟ್ಟೆ ಅಽಕಾರಿ ಎಂ. ರವಿ ಉಪಸ್ಥಿತರಿದ್ದರು.
ಸಹಾಯಕ ವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ ನಿರೂಪಿಸಿದರು.