Call Us Now: 08272 221717

ಕಡಲಕೆರೆ: ಗೃಹರಕ್ಷಕ ದಳದಿಂದ ವನಮಹೋತ್ಸವ, ಗಿಡ, ಆಯುಷ್ ಔಷಧಿ ವಿತರಣೆ

July 4, 2020

ಮೂಡುಬಿದಿರೆ : ಪ್ರೇರಣಾ ಟ್ರಸ್ಟ್, ಮೂಡುಬಿದಿರೆ ಗೃಹರಕ್ಷಕ ದಳ ಮತ್ತು ಶಾಲಾಭಿವೃದ್ಧಿ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಕಡಲಕೆರೆ ಸೈಂಟ್ ಇಗ್ನೇಶಿಯಸ್ ಅ.ಹಿ. ಪ್ರಾ. ಶಾಲೆಯಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮವು ಭಾನುವಾರ ನಡೆಯಿತು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲಿ ಮೋಹನ ಚೂಂತಾರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ `ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡನ್ನು ಬೆಳೆಸುವುದರಿಂದ ಕಾಡುಗಳಲ್ಲಿ ಹಾಯಾಗಿದ್ದ ವೈರಾಣುಗಳು ಮತ್ತು ಇತರ ಜೀವಿಗಳು ನಾಡಿಗೆ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಪರಿಸರ ರಕ್ಷಿಸಿ, ಗಿಡಗಳನ್ನು ನೆಟ್ಟು ಗಿಡ ಮರಗಳನ್ನು ಪೋಷಿಸಿದಲ್ಲಿ ಮಾತ್ರ ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.

ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಫ್ರೊ. ಎಂ. ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾತಾಜಿ ವತ್ಸಲಾ ಅವರು ವನಮಹೋತ್ಸವದ ಪ್ರಾಮುಖ್ಯದ ಬಗ್ಗೆ ಪ್ರಸ್ತಾವನೆಗೈದರು.
ಸುಮಾರು 50 ಮಂದಿ ಗೃಹರಕ್ಷಕರಿಗೆ ಸಸಿಗಳನ್ನು ಹಾಗೂ ಆಯುಷ್ ಇಲಾಖೆ ನೀಡಿದ ಅರ್ಸೆನಿಕಮ್ ಅಲ್ಬಮ್-30 ಎಂಬ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಗೃಹರಕ್ಷಕರಿಗೆ ಉಚಿತವಾಗಿ ಹಂಚಲಾಯಿತು.

ಪ್ರೇರಣಾ ಟ್ರಸ್ಟ್‍ನ ಉಪಾಧ್ಯಕ್ಷ ಚಂದ್ರಹಾಸ ಮತ್ತು ಟ್ರಸ್ಟ್‍ನ ಕಾರ್ಯದರ್ಶಿ ಕೇಶವ ಹೆಗ್ಡೆ ಮತ್ತು ರಾಜೇಶ ಬಂಗೇರಾ ಮೊದಲಾದ ಸದಸ್ಯರು ಉಪಸ್ಥಿತರಿದ್ದರು.ಘಟಕಾ„ಕಾರಿ ಪಾಂಡಿರಾಜ್ ವಂದಿಸಿದರು. ಗೃಹರಕ್ಷಕಿ ವಿನುತಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾವರಣದಲ್ಲಿ ಸುಮಾರು 20 ಗಿಡಗಳನ್ನು ನೆಡಲಾಯಿತು