Call Us Now: 08272 221717

ಗ್ಯಾಂಗ್ರೀನ್ ನಿಂದ ಕಾಲು ಕಳೆದುಕೊಂಡರೂ ಯಕ್ಷಗಾನ ನಾಟ್ಯಕ್ಕಿಲ್ಲ ಅಡ್ಡಿ: ವೇಣೂರು ಕರಿಮಣೇಲು ಯುವಕನಿಂದ ಸಾಧನೆ

May 18, 2020

ಬೆಳ್ತಂಗಡಿ: ಆರನೇ ತರಗತಿಯಲ್ಲಿರುವಾಗ ಗ್ಯಾಂಗ್ರೀನ್ ನಿಂದಾಗಿ ಎಡ ಕಾಲುಗಳನ್ನಾ ಕತ್ತರಿಸಲಾಯಿತಾದರೂ ಕರಗದ‌‌ ಕಲೆಯ ಮೇಲಿನ ಆಸಕ್ತಿ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗನಿಗೆ ಕೃತಕ ಕಾಲು ಜೋಡಿಸಲಾಗಿದ್ದರು, ಯಕ್ಷಗಾನದ ಹಿನ್ನೆಲೆಗೆ ಲಯಬದ್ಧವಾಗಿ ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು ಯುವ ಜನರಿಗೆ ಸ್ಪೂರ್ತಿ ನೀಡುತ್ತಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣೇಲಿನ 17 ವಯಸ್ಸಿನ ಮನೋಜ್ ಕುಮಾರ್ ಅಪರೂಪದ ಸಾಧಕ. ವೇಣೂರು ಕಲಾಕಾರ ಹವ್ಯಾಸಿ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿರುವ ಈತ ಆಂತರಾಷ್ಟ್ರಿಯ ಸಾಧಕರಾದ ಸುಧಾ ಚಂದ್ರನ್ ಅವರ ಪುಸ್ತಕವನ್ನು ಓದಿ ಸ್ಪೂರ್ತಿ ಪಡೆದು, ತನ್ನ ಆಸಕ್ತಿಯ ಯಕ್ಷಗಾನದಲ್ಲಿ ಸಾಧನೆ ಮಾಡಬೇಕೆಂದು ಹೊರಟ್ಟಿದ್ದಾನೆ. ಒಮ್ಮೆಗೆ 20 ರಿಂದ 30 ರಷ್ಟು ಧಿಗಿಣ ಹಾಕುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾನೆ. ಈತನ ಆಸಕ್ತಿ, ಕಲೆಯ ಮೇಲಿನ ಪ್ರೀತಿಗೆ ಕೃತಕ ಕಾಲು ಅಡ್ಡ ಬಾರದೆ, ಇಂದು ಅವಿಭಜಿತ ದ.ಕ ಜಿಲ್ಲೆಯಲ್ಲಿ ಟ್ಯಾಲೆಂಟ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾನೆ.