Call Us Now: 08272 221717

ಮೂಡುಬಿದಿರೆಯಲ್ಲಿ ನಾಲ್ಕು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು

July 20, 2020

ಮೂಡುಬಿದಿರೆ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಕೊರೊನಾ ಪಾಸಿಟಿವ್ನ ನಾಲ್ಕು ಪ್ರಕರಣಗಳು ದೃಢಪಟ್ಟಿದೆ.

ಪುತ್ತಿಗೆ, ಶಿರ್ತಾಡಿ, ಬೆಳುವಾಯಿ ಹಾಗೂ
ಪುರಸಭೆ ವ್ಯಾಪ್ತಿಯ ಪ್ರಾಂತ್ಯದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿದೆ. ಈ ನಾಲ್ಕೂ ಪ್ರಕರಣಗಳು ಶನಿವಾರ ದೃಢಪಟ್ಟಿರುವಂತದ್ದು. ಶುಕ್ರವಾರ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಭಾನುವಾರ ಪ್ರಾಥಮಿಕ ಸಂಪರ್ಕದಿಂದ ಒಂದು ಪ್ರಕರಣ ದೃಢಪಟ್ಟಿದ್ದು, ಅದು ಈಗಾಗಲೇ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ದಾಖಲಾಗಿರುವಂತದ್ದಾಗಿದೆ.