Call Us Now: 08272 221717

ಜೆಸಿಐ ಮಿಡ್‌ಕಾನ್ 2020: ಜೆಸಿಐ ಮೂಡುಬಿದಿರೆ ತ್ರಿಭುವನ್ಗೆ ವಿಶೇಷ ಗೌರವ ಪುರಸ್ಕಾರ

July 28, 2020

ಮೂಡುಬಿದಿರೆ: ಕೋವಿಡ್ 19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂಡುಬಿದಿರೆ ಜೆಸಿಐ ಮೂಡುಬಿದಿರೆ ತ್ರಿಭುವನ್ ಘಟಕವು ಸಲ್ಲಿಸಿದ ಮಾನವೀಯ ಮತ್ತು ಅವಿರತ ಸೇವೆಗಾಗಿ ಮಂಗಳೂರಿನ ಮಲ್ಲಿಕಟ್ಟೆಯ ಸುಮ ಸದನದಲ್ಲಿ ಮಂಗಳವಾರ ನಡೆದ `ಜೆಸಿಐ ಮಿಡ್‌ಕಾನ್ 2020′ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂತ್ಯವಾರು ಪ್ರಶಸ್ತಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಪುರಸ್ಕಾರವನ್ನು ಪಡೆಯಿತು.

ಮೂಡುಬಿದಿರೆ ಘಟಕಕ್ಕೆ ವಿಶೇಷ ಕಾರ್ಯಕ್ರಮ ಆಯೋಜನೆ( ಪ್ರಥಮ), ವಿಶೇಷ ಕಾರ್ಯವೈಖರಿ ಅತ್ಯುತ್ತಮ ಘಟಕಾಧ್ಯಕ್ಷರು (ದ್ವಿತೀಯ), ಗ್ರೀನ್ ಸ್ಟಾರ್ ಉತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ಡೈಮಂಡ್ ಲೋಮ್ ಪ್ರಶಸ್ತಿ, ಎಂ.ಆರ್.ಎಫ್ ಅವಾರ್ಡ್ ಲಭಿಸಿದೆ.

ವಲಯ 15ರ ವಲಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಅನಿಲ್ ಕುಮಾರ್, ವಲಯ ನಿರ್ದೇಶಕ ಸೆನೆಟರ್ ರಾಯನ್ ಉದಯ ಕ್ರಾಸ್ತ, ಅಶೋಕ್ ತೆಕ್ಕಟ್ಟೆ, ಅಶ್ವಿನಿ ಐತಾಳ್, ಜಬ್ಬಾರ್ ಸಾಹೇಬ್, ವಲಯ ಉಪಾಧ್ಯಕ್ಷ ಜೇಸಿ ಮೇಧಾವಿ ಎಂ, ಪೂರ್ವ ವಲಯಾಧ್ಯಕ್ಷರಾದ ಅಶೋಕ್ ಚುಂತಾರು ಮತ್ತು ಆಶಿತ್ ಕುಮಾರ್ ಉಪಸ್ಥಿತರಿದ್ದರು.

ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಜೇಸಿರೆಟ್ ಅಧ್ಯಕ್ಷೆ ವೀಣಾ ಸಂತೋಷ್, ಕಾರ್ಯದರ್ಶಿ ದಯಾನಂದ್ ಹೆಗ್ಡೆ, ಜೇಜೆಸಿ ಅಧ್ಯಕ್ಷ ಜಯಕುಮರ್ ಜೈನ್, ಸದಸ್ಯ ಜೇಸಿ ಸುನಿಲ್ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.