Call Us Now: 08272 221717

ಬಂಟ್ವಾಳ: ಮೋದಿ ಸರ್ಕಾರದ ಯೋಜನೆಗಳ ಪ್ರಚಾರ

June 11, 2020

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಶ್ರೀ ನರೇಂದ್ರ ಮೋದಿಯವರು ಬರೆದಂತಹ ಸಂದೇಶದ ಪತ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕರಿಯಂಗಳ ಗ್ರಾಮದ ಬಡಕಬೈಲಿನ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿದರು.

ಮೋದಿ ಸರ್ಕಾರದ ದೇಶದ ಜನತೆಗಾಗಿ ಜಾರಿ ತಂದ ಜನಪರ ಯೋಜನೆ,ಅಯೋಧ್ಯೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ, ತ್ರಿವಳಿ ತಲಾಕ್ ನಿಷೇಧ ,ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ನೀಡಿರುವ 370 ವಿಧಿ ರದ್ದತಿ,ಪೌರತ್ವ ಕಾನೂನಿಗೆ ತಿದ್ದುಪಡಿ ಹೀಗೆ ಹಲವು ದಶಕಗಳ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ವದೇಶಿ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲು ಆತ್ಮನಿರ್ಭರ್ ಭಾರತದ ಮೂಲಕ ವಿಶ್ವದಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಯೋಜನೆಗಳನ್ನು ಈ ಸಂದರ್ಭದಲ್ಲಿ ಜನತೆಗೆ ತಿಳಿಸಿದರು.

ಭೂನ್ಯಾಯ ಮಂಡಳಿ ಸದಸ್ಯರಾದ ಸುಕೇಶ್ ಚೌಟ ಬಡಕಬೈಲು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಅಶೋಕ್, ಗ್ರಾ.ಪಂ ಸದಸ್ಯೆ ಶಕುಂತಳಾ,ಪ್ರಮುಖರಾದ ಸಂದೀಪ್,ಸೂರ್ ದಾಸ್,ಸಚಿನ್,ಸತೀಶ್ ,ಚರಣ್,ಜಯಂತ ಉಪಸ್ಥಿತರಿದ್ದರು.