Call Us Now: 08272 221717

ನೆಲ್ಲಿಕಾರು ಪಂಚಾಯಿತಿ ಕಚೇರಿಯಲ್ಲಿ ವಿದ್ಯುತ್ ಸೆನ್ಸಾರ್ ಚಾಲಿತ ಸ್ಯಾನಿಟೈಸರ್ ಉಪಕರಣ

June 26, 2020

ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಪಂಚಾಯತ್ ಕಚೇರಿಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ವಿದ್ಯುತ್ ಸೆನ್ಸರ್ ಚಾಲಿತ ಸ್ಯಾನಿಟೈಸರ್ ಉಪಕರಣವನ್ನು ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್‍ಟೌನ್‍ನ ನಿಯೋಜಿತ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಗುರುವಾರ ಉದ್ಘಾಟಿಸಿದರು.

ಪಂಚಾಯತ್‍ನಲ್ಲಿ ಕೈ ತೊಳೆಯುವ ನೀರಿನ ವ್ಯವಸ್ಥೆ, ಶುದ್ಧಕುಡಿಯುವ ನೀರು ಸಹಿತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾದರಿಯಾಗಿದೆ ಎಂದು ಅವರು ಪ್ರಶಂಸಿದರು.

ಪಂಚಾಯತ್ ಅಧ್ಯಕ್ಷ ಜಯಂತ್ ಹೆಗ್ಡೆ, ಉಪಾಧ್ಯಕ್ಷೆ ಕುಶಲಾ, ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಮಾಜಿ ಉಪಾಧ್ಯಕ್ಷ ಶಶಿಧರ ಪಿ., ತಾಲೂಕು ಪಂಚಾಯತ್ ಸದಸ್ಯೆ ರೇಖಾ ಸಾಲ್ಯಾನ್, ಸದಸ್ಯ ಉದಯ ಪೂಜಾರಿ, ಪಿಡಿಒ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶೀ ಶೇಖರ್ ಉಪಸ್ಥಿತರಿದ್ದರು. ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿ, ವಂದಿಸಿದರು.